ತುಟಿಗಳ ಆರೋಗ್ಯ ನಿಮ್ಮ ಮುಖದ ಆಕರ್ಷಣೆಗೆ ಪ್ರಮುಖ ಅಂಶ. ಆದರೆ ಧೂಮಪಾನ ಮಾಡುವುದರಿಂದ ತುಟಿಗಳು ಕಪ್ಪಾಗುವುದು ಸಾಮಾನ್ಯವಾದ ಸಮಸ್ಯೆಯಾಗಿದೆ. ನಿಕೋಟಿನ್ ಮತ್ತು ಹೊಗೆಯಿಂದ ಹೊರಹೊಮ್ಮುವ ಶಾಖದ ಪರಿಣಾಮ, ತುಟಿಗಳ ಸುತ್ತಮುತ್ತಲಿನ ಚರ್ಮದ ಮೆಲನಿನ್ ಪ್ರಮಾಣ ಹೆಚ್ಚಾಗಿ ಬಣ್ಣ ಕತ್ತಲಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಆದರೆ ಇದಕ್ಕೆ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿವೆ ಕೆಲವು ನೈಸರ್ಗಿಕ ಮಾರ್ಗಗಳು:
ಜೇನುತುಪ್ಪ: ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದ್ದು, ತುಟಿಗಳಿಗೆ ಬಣ್ಣವನ್ನು ಹಿಂತಿರುಗಿಸುತ್ತದೆ.
ತೆಂಗಿನ ಎಣ್ಣೆ: ತೇವಾಂಶ ಪೂರೈಸಿ, ಕಪ್ಪಾಗದಂತೆ ತಡೆಯುತ್ತದೆ.
ಅಲೋವೆರಾ: ಚರ್ಮದ ಮೃದುವುತನವನ್ನು ಹೆಚ್ಚಿಸಿ, ಕಪ್ಪು ಬಣ್ಣ ನಿವಾರಣೆ.
ಸೌತೆಕಾಯಿ ಪೇಸ್ಟ್: ಸಿಲಿಕಾ ಸಂಯುಕ್ತಗಳು ತುಟಿಗಳ ವರ್ಣವನ್ನು ಸುಧಾರಿಸುತ್ತವೆ.
ಗ್ರೀನ್ ಟೀ: ಆ್ಯಂಟಿಆಕ್ಸಿಡೆಂಟ್ ಹೊಂದಿದ್ದು, ಹಾನಿಗೊಂಡ ಕೋಶಗಳ ಪುನರ್ ನಿರ್ಮಾಣಕ್ಕೆ ಸಹಾಯ.
ದೈನಂದಿನ ಜೀವನದಲ್ಲಿ ಈ ಸರಳ ಮನೆಮದ್ದುಗಳನ್ನು ಬಳಸುವುದರಿಂದ, ಧೂಮಪಾನದ ಪರಿಣಾಮವಾಗಿ ಕಪ್ಪಾಗಿರುವ ತುಟಿಗಳಿಗೆ ನೈಸರ್ಗಿಕವಾದ ಪರಿಹಾರ ದೊರೆಯಬಹುದು ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.