ಚನ್ನಪಟ್ಟಣ:ತಾಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ಯುವಕನೊಬ್ಬನನ್ನು ಕೊಲೆ ಮಾಡಿ, ರಸ್ತೆ ಬದಿ ಬಿಸಾಡಿ ಹೋಗಿದ್ದಾರೆ ದುಷ್ಕರ್ಮಿಗಳು. ದೊಡ್ಡನಹಳ್ಳಿ ಗ್ರಾಮದ ರಂಜಿತ್ ಕುಮಾರ್(29) ಕೊಲೆಯಾದ ಯುವಕ. ತನ್ನ ಜಮೀನಿನಲ್ಲಿ ಹುಲ್ಲು ಕೊಯ್ಯುವ ವಿಚಾರವಾಗಿ ಜಗಳವಾಗಿದೆ ಎನ್ನಲಾಗಿದೆ.
Advertisement
ಜಮೀನಿನಲ್ಲಿ ಕೊಲೆ ಮಾಡಿ ಶವವನ್ನು ರಸ್ತೆ ಬದಿಗೆ ಎಳೆದು ತಂದು ಹಾಕಿದ ದುಷ್ಕರ್ಮಿಗಳು ತಡ ರಾತ್ರಿ ಪೊಲೀಸರ ಬಳಿ ಹೋಗಿ ಶರಣಾಗಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.