ಪಾರ್ಕಿಂಗ್ ವಿಚಾರಕ್ಕೆ ಜಗಳ: ನಟಿ ಹುಮಾ ಖುರೇಷಿ ಸಹೋದರನ ಹತ್ಯೆ

0
Spread the love

ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರ ಸಂಬಂಧಿ ಆಸಿಫ್ ಎಂಬುವವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮೂಲಗಳ ಪ್ರಕಾರ ಪಾರ್ಕಿಂಗ್ ವಿಚಾರದಲ್ಲಿ ವಾದ ವಿವಾದ ನಡೆದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ದೆಹಲಿಯ ನಿಜಾಮುದ್ದೀನ್‌ನಲ್ಲಿ ಪಾರ್ಕಿಂಗ್ ವಿಚಾರದಲ್ಲಿ ಈ ಕೊಲೆ ನಡೆದಿದೆ.

Advertisement

ಗುರುವಾರ ತಡರಾತ್ರಿ ನಿಜಾಮುದ್ದೀನ್ ಪೊಲೀಸ್ ಠಾಣೆ ಪ್ರದೇಶದ ಜಂಗ್‌ಪುರ ಭೋಗಲ್ ಬಜಾರ್ ಲೇನ್‌ನಲ್ಲಿ ಪಾರ್ಕಿಂಗ್ ವಿಚಾರದಲ್ಲಿ ವಿವಾದ ನಡೆದಿದೆ. ತಡರಾತ್ರಿ ರಾತ್ರಿ 11 ಗಂಟೆ ಸುಮಾರಿಗೆ, ಸ್ಕೂಟಿಯನ್ನು ಗೇಟ್‌ನಿಂದ ತೆಗೆದು ಪಕ್ಕದಲ್ಲಿ ನಿಲ್ಲಿಸುವ ವಿಚಾರದಲ್ಲಿ ನಡೆದ ಜಗಳದಲ್ಲಿ, ಆರೋಪಿಗಳು ಆಸಿಫ್ ಖುರೇಷಿ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆಸಿಫ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಹುಮಾ ಖುರೇಷಿ ಕುಟುಂಬದವರು ಹೇಳುವ ಪ್ರಕಾರ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಈ ಮೊದಲು ಕೂಡ ಆಸಿಫ್ ಹಾಗೂ ನೆರೆಹೊರೆಯವರ ನಡುವೆ ಜಗಳವಾಗಿತ್ತಂತೆ. ಈಗ ಅದು ಬೇರೆ ಹಂತಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂಬುದು ಬೇಸರದ ವಿಚಾರ ಎಂದಿದ್ದಾರೆ.

‘ನನ್ನ ಪತಿ ಕಚೇರಿಯಿಂದ ಮನೆಗೆ ಬಂದಿದ್ದರು. ನೆರೆ ಮನೆಯವರ ಸ್ಕೂಟರ್ ನಮ್ಮ ಮನೆಯ ಮುಂದೆ ನಿಂತಿತ್ತು. ಈ ಸಮಯದಲ್ಲಿ, ಅವರು ಸ್ಕೂಟರ್‌ಗಳನ್ನು ಸ್ಥಳದಿಂದ ತೆಗೆದು ಬೇರೆಡೆ ನಿಲ್ಲಿಸಲು ಕೇಳಿಕೊಂಡರು. ಪಕ್ಕದ ಮನೆಯವರು ಸುಮ್ಮನಾಗಲಿಲ್ಲ ಮತ್ತು ನನ್ನ ಗಂಡನ ಮೇಲೆ ನಿಂದಿಸಲು ಪ್ರಾರಂಭಿಸಿದರು. ಆ ನಂತರ  ನೇರವಾಗಿ ಹಲ್ಲೆ ನಡೆಸುವ ಹಂತಕ್ಕೆ ಹೋಯಿತು. ದಾಳಿಯಲ್ಲಿ ನನ್ನ ಪತಿ ಗಂಭೀರವಾಗಿ ಗಾಯಗೊಂಡಿದ್ದರು. ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು ಆದರೆ ಅವರು ಮೃತಪಟ್ಟರು’ ಎಂದು ಆಸಿಫ್ ಪತ್ನಿ ಹೇಳಿದ್ದಾರೆ.

ಪೊಲೀಸರು ತಕ್ಷಣ ಕ್ರಮ ಕೈಗೊಂಡು ಇಬ್ಬರು ಆರೋಪಿಯನ್ನು ಬಂಧಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here