ಖ್ಯಾತ ನಟ ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡಿದೆ. ಕಳೆದ ಕೆಲ ತಿಂಗಳ ಹಿಂದೆ ಮೊದಲ ಮಗಳ ಮದುವೆ ಮಾಡಿದ್ದ ನಟ ಇದೀಗ ಎರಡನೇ ಮಗಳ ಮದುವೆ ಮಾಡಲು ಸಜ್ಜಾಗಿದ್ದಾರೆ. ಅರ್ಜುನ್ ಸರ್ಜಾ ಎರಡನೇ ಮಗಳು ಅಂಜನಾ ವಿದೇಶಿ ಹುಡುಗನ ಕೈ ಹಿಡಿಯುತ್ತಿದ್ದು ಇದೀಗ ಅಂಜನಾ ಅರ್ಜುನ್ ತನ್ನ ಗೆಳೆಯನ ಫೋಟೋ ರಿವೀಲ್ ಮಾಡಿದ್ದಾರೆ.
ಸರ್ಜಾ ಅವರ ಮೊದಲ ಮಗಳು ಐಶ್ವರ್ಯಾ ಸರ್ಜಾ ಮದುವೆ ಕಳೆದ ವರ್ಷ ನಡೆದಿದ್ದು, ಇದೀಗ ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಅಂಜನಾ ಸದ್ದು ಇಲ್ಲದೇ ಇಟಲಿಯಲ್ಲಿ ತಮ್ಮ ಬಹುಕಾಲದ ಗೆಳೆಯನ ಪ್ರೀತಿಗೆ ಸಮ್ಮತಿಯನ್ನು ಸೂಚಿಸಿದ್ದಾರೆ. ಚಿತ್ರರಂಗದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿರುವ ಅಂಜನಾ ಫಾರಿನ್ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಕಳೆದ 13 ವರ್ಷಗಳಿಂದ ಪರಿಚಯವಿದ್ದು ಹುಡುಗನ ಜೊತೆ ಅಂಜನಾ ಎಂಗೇಜ್ ಆಗಿದ್ದಾರೆ. ಅಂಜನಾ ಅರ್ಜುನ್ ಅವರು ವಿದೇಶಿ ಯುವಕನೊಡನೆ ವಿದೇಶದಲ್ಲಿ ಎಂಗೇಜ್ ಆಗಿದ್ದರೆ. ಅಂಜನಾ ಅರ್ಜುನ್ ಈ ಹಿಂದೆ ಅವರ ಅಕ್ಕನ ಮದುವೆಗೂ ತಮ್ಮ ಬಾಯ್ಫ್ರೆಂಡ್ ಅನ್ನು ಕರೆದುಕೊಂಡು ಬಂದಿದ್ದರು. ಅವರೊಟ್ಟಿಗೆ ಚಿತ್ರ, ವಿಡಿಯೋಗಳನ್ನು ಹಂಚಿಕೊಂಡಿದ್ದರು. ಈಗ ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.\