ವಿಜಯಸಾಕ್ಷಿ ಸುದ್ದಿ, ಮುಂಡರಗಿ : ರಾಜ್ಯ ಸರ್ಕಾರವು ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜನವರಿ 1, 2024ರಿಂದ ಅನ್ವಯವಾಗುವಂತೆ ಶೇ.3.75 ಬಿಡುಗಡೆ ಮಾಡಿ ಮೂಲ ವೇತನದ ಶೇ.38.75ರಿಂದ ಶೇ.42.5ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವುದಕ್ಕೆ ಸರ್ಕಾರಿ ನೌಕರರ ಸಂಘದ ಮುಂಡರಗಿ ತಾಲೂಕು ಶಾಖೆಯ ಪದಾಧಿಕಾರಿಗಳು ಹರ್ಷ ವಕ್ತಪಡಿಸಿದ್ದಾರೆ.
ಸಕಾಲದಲ್ಲಿ ತುಟ್ಟಿಭತ್ಯೆಯನ್ನು ಬಿಡುಗಡೆಗೊಳಿಸಿ, ಸಮಸ್ತ ನೌಕರರ ಹಿತವನ್ನು ರಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರರಿಗೆ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿಯವರಿಗೆ ಮತ್ತು ಸರ್ಕಾರದ ಆರ್ಥಿಕ ಇಲಾಖೆಯ ಎಲ್ಲಾ ಉನ್ನತ ಮಟ್ಟದ ಅಧಿಕಾರಿಗಳಿಗೆ ಮುಂಡರಗಿ ತಾಲೂಕು ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಕಾರ್ಯದರ್ಶಿ ಶಂಕರ ಸರ್ವದೆ ಅಭಿನಂದಿಸಿದ್ದಾರೆ.



