ಬೆಂಗಳೂರು: ದೆಹಲಿಯಿಂದ ಬಂದು ಬೆಂಗಳೂರಿನ ಮನೆ ಒಡೆದಿದ್ದ ಗ್ಯಾಂಗ್ ಅನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ. ಅಕ್ಬರ್, ಸೋನು ಯಾದವ್ ಬಂಧಿತ ಆರೋಪಿಗಳು. ಸಂಜಯ್ ನಗರದ ರೇಣುಕಾ ಎಂಬುವರ ಮನೆಯಲ್ಲಿ 50 ಲಕ್ಷ ಮೌಲ್ಯದ 700 ಗ್ರಾಂ ಚಿನ್ನವನ್ನು ಆರೋಪಿಗಳು ಕದ್ದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಜಯ್ ನಗರ ಪೊಲೀಸರು ದೆಹಲಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
Advertisement
ಈ ಹಿಂದೆ ಹಲವು ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಕದ್ದ ಮಾಲುಗಳನ್ನು ಪತ್ನಿ ಮುಬೀನಾಗೆ ನೀಡುತಿದ್ದ ಅಕ್ಬರ್. ಕದ್ದ ಚಿನ್ನವನ್ನು ಮಾರಾಟ ಮಾಡಲು ಹೋದಾಗ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 405 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದ್ದು, ಸಂಜಯ್ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.