ವಿಜಯಸಾಕ್ಷಿ ಸುದ್ದಿ, ಗದಗ : ನಗದರಲ್ಲಿ ಸರ ಕಳ್ಳತನ ಮಾಡುತ್ತಿದ್ದ ಮಾಹಾರಾಷ್ಟ್ರ ಮೂಲದ ಆರೋಪಿ ಸುರೇಶ ತಂದೆ ಯಲ್ಲಪ್ಪ ಶಿಪರಿ(ಶಿವಪೂರಿ) ಎಂಬುವವನ್ನು ಬೆಟಗೇರಿ ವೃತ್ತ ಸಿಪಿಐ ಧೀರಜ್ ಶಿಂಧೆ, ಮುಳಗುಂದ ಸಿಪಿಐ ಸಂಗಮೇಶ ಶಿವಯೋಗಿ, ಡಿ.ಚಾಮುಂಡೇಶ್ವರಿ ನೇತೃತ್ವದಲ್ಲಿ ಬಂಧಿಸಲಾಗಿದೆ.
ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಗದಗ ಪೊಲೀಸ್ ಹೆಚ್ಚುವರಿ ಅಧೀಕ್ಷಕ ಎಂ.ಬಿ. ಸುಂಕದ, ಗದಗ ಉಪ ವಿಭಾಗ ಉಪ ಅಧೀಕ್ಷಕ ಜೆ.ಎಚ್. ಇನಾಮದಾರ, ಪ್ರಭು ಕಿರೇದಳ್ಳಿ ಇವರುಗಳ ಮಾರ್ಗದರ್ಶನದಲ್ಲಿ ರಚನೆಯಾದ ತಂಡದಲ್ಲಿ ಎಸ್.ಬಿ. ಜಾಂಬೋಟಿ, ಬಿ.ಎಫ್. ಯರಗುಪ್ಪಿ, ಎಸ್.ಎ. ಗುಡ್ಡಮಠ, ಐ.ಎ. ಮಿರ್ಜಾ, ಪಿ.ಆರ್. ರಾಠೋಡ, ಎಂ.ಎಸ್. ಗಾಣಿಗೇರ, ಎಸ್.ಡಿ. ಬಳ್ಳಾರಿ, ಎಂ.ಎಫ್. ಅಸೂಟಿ, ಸಿ.ಎನ್. ಮಾದರ, ಪಿ.ಎಚ್. ದೊಡ್ಡಮನಿ, ಅಶೋಕ ಗದಗ, ನಾಗರಾಜ ಭರಡಿ, ಗುರು ಬೂದಿಹಾಳ, ಜ್ಯೋತಿ ಚವ್ಹಾಣ, ಎಲ್.ಬಿ. ಪೂಜಾರ, ಎಸ್.ಸಿ. ಕೊರಡೂರ ಅವರನ್ನೊಳಗೊಂಡ ತಂಡ ರಚಿಸಿ ಒಟ್ಟು 4 ಲಕ್ಷ 25 ಸಾವಿರ ಮೌಲ್ಯದ 85 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮನೆಗಳ್ಳನಿಂದ ಜಪ್ತಿ ಮಾಡಿಕೊಂಡಿದ್ದಾರೆ.



