ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಪುಷ್ಪ 2 ಭರ್ಜರಿಯಾಗಿಯೇ ರಿಲೀಸ್ ಆಗಿದೆ. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಹೆಂಗಸರು, ಮಕ್ಕಳು ಎನ್ನದೆ ಥಿಯೇಟರ್ ಗೆ ನುಗ್ಗುತ್ತಿದ್ದಾರೆ. ಇದರ ನಡುವೆ ಬೆಂಗಳೂರಿನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಅಭಿಮಾನಿಗಳು ಎಲ್ಲೆಡೆ ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಆದ್ರೆ ಫಸ್ಟ್ ಡೇ ಫಸ್ಟ್ ಶೋ ನೋಡುವ ದಾಂವಂತದಲ್ಲಿ ಮೂವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಪುಷ್ಪ 2 ಚಿತ್ರ ರಿಲೀಸ್ ವೇಳೆ ಬೆಂಗಳೂರಿನ ಊರ್ವಶಿ ಥಿಯೇಟರ್‌ನಲ್ಲಿ ಅಭಿಮಾನಿಗಳು ಕೆಲ ಹುಚ್ಚಾಟ ಮೆರೆದಿದ್ದಾರೆ. ತೆರೆಯ ಮೇಲೆ ಅಲ್ಲುಅರ್ಜುನ್ ಎಂಟ್ರಿಕೊಡ್ತಿದ್ದಂಗೆ ಉತ್ಸುಕರಾಗಿದ್ದ ಅಭಿಮಾನಿಗಳು ಕೈಯಲ್ಲಿ ಬೆಂಕಿ ಹೊತ್ತಿಸಿ ಪರದೆಯ ಮುಂದೆ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದ್ದು, ಮಾಹಿತಿ ತಿಳಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಪುಷ್ಪ 2 ಚಿತ್ರ ಪ್ರಸಾರಕ್ಕೆ ಕನ್ನಡ ಪರ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಚಿತ್ರದುರ್ಗದ ವೆಂಕಟೇಶ್ವರ, ಪ್ರಸನ್ನ ಥಿಯೇಟರ್ ನಲ್ಲಿ ಪುಷ್ಪ 2 ಚಿತ್ರ ಪ್ರದರ್ಶನ ಕಾಣ್ತಿದೆ. ಇದೇ ವೇಳೆ ಚಿತ್ರಮಂದಿರಕ್ಕೆ ನುಗ್ಗಿದ ಕರುನಾಡ ವಿಜಯಸೇನೆ ಕಾರ್ಯಕರ್ತರ ಕಿಡಿಕಾರಿದ್ರು. ಪುಷ್ಪ 2 ಪೋಸ್ಟರ್ ವಿಜಯಸೇನೆ ಕಾರ್ಯಕರ್ತರು ಕಪ್ಪು ಮಸಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.