ಶಹರ ಪೊಲೀಸರ ಕಾರ್ಯಾಚರಣೆ: ಅಂತರ ಜಿಲ್ಲಾ ಮನೆ ಕಳ್ಳ ಸದ್ದಾಂ ಹುಸೇನ್@ಫೋತರಾಜ್ ಬಂಧನ

0
gadaga police
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದಲ್ಲಿ ಫೆ.9ರಂದು ನಡೆದಿದ್ದು ಮನೆಗಳ್ಳತನಕ್ಕೆ ಸಂಬಂಧಿಸಿದ ಪ್ರಕರಣವನ್ನು ಭೇದಿಸಿ, ಆರೋಪಿಯನ್ನು ಪತ್ತೆಹಚ್ಚುವಲ್ಲಿ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

Advertisement

ಫೆ.9ರಂದು ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 1-30ರ ನಡುವಿನ ಅವಧಿಯಲ್ಲಿ ಫಿರ್ಯಾದಿದಾರರಾದ ಬ್ಯಾಂಕರ್ಸ್ ಕಾಲೋನಿಯ ಶಾಂತಾ ಚವಡಿ ಮತ್ತು ವೀರೇಶ್ವರ ನಗರದ ಲಲಿತಾ ಬಂಡಿ ಇವರ ಮನೆಗಳನ್ನು ಯಾರೋ ಕಳ್ಳರು ಹಗಲು ಸಮಯದಲ್ಲಿ ಮನೆ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 06/2024 ಮತ್ತು 08/2024 ಕಲಂ. 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿತ್ತು.

ಈ ಎರಡು ಪ್ರಕರಣಗಳನ್ನು ಭೇದಿಸುವ ಕುರಿತು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಮ್.ಬಿ. ಸಂಕದ, ಪೊಲೀಸ್ ಉಪಾಧೀಕ್ಷಕ ಜೆ.ಹೆಚ್. ಇನಾಮದಾರ್ ಅವರ ಮಾರ್ಗದರ್ಶನದಲ್ಲಿ ಗದಗ ಶಹರ ಠಾಣೆಯ ಪಿಐ ಡಿ.ಬಿ. ಪಾಟೀಲ್, ಪಿಎಸ್ಐ ಹೆಚ್.ಕೆ. ಪಾಟೀಲ್, ಸಿಬ್ಬಂದಿಗಳಾದ ವಾಯ್.ಬಿ. ಪಾಟೀಲ್, ಗುರು ಬೂದಿಹಾಳ(ಟೆಕ್ನಿಕಲ್ ಸೆಲ್), ಎಸ್.ಎಸ್. ಮಾವಿನಕಾಯಿ, ಯು.ಎಫ್. ಸುಣಗಾರ, ಎಮ್.ಬಿ. ವಡ್ಡಟ್ಟಿ, ಪ್ರವೀಣ ಕಲ್ಲೂರ, ಕೆ.ಡಿ. ಜಮಾದಾರ, ಪಿ.ಬಿ. ಮೂಲಿಮನಿ, ಪಿ.ಎ. ಭರಮಗೌಡ್ರ, ಸಂಜೀವ ಕೊಡುರ(ಟೆಕ್ನಿಕಲ್ ಸೆಲ್) ಇವರು ಫೆ.22ರಂದು ಸದರಿ ಪ್ರಕರಣವನ್ನು ಪತ್ತೆ ಮಾಡಿದ್ದಾರೆ.

ಪ್ರಕರಣದಲ್ಲಿ ಆರೋಪಿತನಾದ ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ರಾಜು @ ಪೋತರಾಜ @ ಸದ್ದಾಂಹುಸೇನ @ ಗೌತಮರಾಜ ತಂದೆ ಚನ್ನಪ್ಪ @ ಬಾಲಪ್ಪ ಕುಪ್ಪಿನಕೇರಿ ಇವನನ್ನು ವಶಕ್ಕೆ ಪಡೆದು ಸದರಿ ಪ್ರಕರಣದಲ್ಲಿ ಕಳ್ಳತನವಾದ ಒಟ್ಟು 2,71,000 ರೂ. ಕಿಮ್ಮತ್ತಿನ 76 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿತರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಆರಕ್ಷಕ ಅಧೀಕ್ಷಕ ಬಿ.ಎಸ್. ನೇಮಗೌಡ ಪ್ರಶಂಸಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here