HomeCrime Newsಲಕ್ಷ್ಮೇಶ್ವರ: ಆಭರಣ ಕಳ್ಳತನ ಮಾಡಿದ್ದ ಇಬ್ಬರು ಚಾಲಾಕಿ ಮಹಿಳೆಯರ ಬಂಧನ

ಲಕ್ಷ್ಮೇಶ್ವರ: ಆಭರಣ ಕಳ್ಳತನ ಮಾಡಿದ್ದ ಇಬ್ಬರು ಚಾಲಾಕಿ ಮಹಿಳೆಯರ ಬಂಧನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ : ಪಟ್ಟಣದ ಬಸ್ ನಿಲ್ದಾಣದಲ್ಲಿ ಆಭರಣ ಕಳ್ಳತನ ಮಾಡಿದ ಚಾಲಾಕಿ ಮಹಿಳೆಯರನ್ನು ಲಕ್ಷೇಶ್ವರ ಪೊಲೀಸರು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕಲಬುರ್ಗಿಯ ನಾಗೇಶ್ವರಿ ಸಂದೀಪ ಉಪಾದ್ಯಾ(38), ಶೀತಲ್ ಅಮಿತ ಪಾಟೀಲ (40) ಅವರನ್ನು ಬಂಧಿಸಿ ಅವರಿಂದ ಒಟ್ಟು 3,84,500 ರೂ ಮೌಲ್ಯದ 77 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರ ಮಾರ್ಗದರ್ಶನ, ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ, ಚನ್ನಬಸವ ಬಬಲಿ, ಎಎಸ್‌ಐ ಎಂ.ಎ. ಮೌಲ್ವಿ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ತಂಡದಲ್ಲಿ ಗುರು ಬೂದಿಹಾಳ, ಸಂಜು ಕೊರಡೂರ, ಮಧುಚಂದ್ರ ಧಾರವಾಡ, ವಿದ್ಯಾಶ್ರೀ ಹದಲಿ, ಅಪ್ಪಣ್ಣ ರಾಠೋಡ, ಎಮ್.ಎ. ಶೇಖ, ಎಮ್.ಎಸ್. ಬಳ್ಳಾರಿ, ಆನಂದ ಕಮ್ಮಾರ, ಗಣೇಶ ಗ್ರಾಮಪುರೋಹಿತ್, ಹೆಚ್.ಐ. ಕಲ್ಲಣ್ಣವರ, ಪಾಂಡುರಂಗರಾವ, ಹನುಮರೆಡ್ಡಿ ತಾರಿಕೊಪ್ಪ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!