ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಬಂಗಾರದ ಆಭರಣಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸುವಲ್ಲಿ ಲಕ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.
ಭದ್ರಾವತಿಯ ಶಾಂತಿ ವಡ್ಡರ, ಸುಶೀಲಮ್ಮಾ ವಡ್ಡರ ಎಂಬ ಆರೋಪಿಗಳಿಂದ ಒಟ್ಟು 2.60 ಲಕ್ಷ ರೂ ಮೌಲ್ಯದ 55ಗ್ರಾಂ ಬಂಗಾರದ ಆಭರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ನಾಗರಾಜ ಗಡಾದ, ಕ್ರೈಂ ಪಿಎಸ್‌ಐ ಟಿ.ಕೆ. ರಾಠೋಡ, ಎಎಸ್‌ಐ ಎನ್.ಎ. ಮೌಲ್ವಿ, ಗುರು ಬೂದಿಹಾಳ, ಎಂ.ಎಂ, ಶೀಗಿಹಳ್ಳಿ, ಆರ್.ಎಸ್ ಯರಗಟ್ಟಿ, ಎಂ.ಎ ಶೇಖ್, ಎಂ.ಎಸ್ ಬಳ್ಳಾರಿ, ಎ.ಆರ್. ಕಮ್ಮಾರ, ಎಚ್.ಐ. ಕಲ್ಲಣ್ಣವರ, ಪಾಂಡುರಂಗರಾವ್ ಸೇರಿ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡಿದ್ದರು.



