ಬೆಂಗಳೂರು: ಕಳೆದ ಏಳು ವರ್ಷಗಳಿಂದ ಶೂ.. ಚಪ್ಪಲಿ ಕದ್ದು ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಆಗ್ತಿದ್ದ ಖತರ್ನಾಕ್ ಕಳ್ಳರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
Advertisement
ಬೆಂಗಳೂರು ನಗರದಲ್ಲಿ ಬರೋಬ್ಬರಿ ಏಳು ವರ್ಷಗಳಿಂದ ಬ್ರಾಂಡೆಂಡ್ ಶೂ ಚಪ್ಪಲಿ ಎಗರಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಖದೀಮರು. ನಗರದ ಅಂಗಡಿ, ದೇವಸ್ಥಾನ, ಮದುವೆ ಕಾರ್ಯಕ್ರಮ ಎಲ್ಲೇ ಇದ್ರೂ ಈ ಖದೀಮರು ಹಾಜರು.
ಕಣ್ಣು ಮಿಟುಕಿಸುವಷ್ಟರಲ್ಲಿ ಬ್ರಾಂಡೆಂಡ್ ಶೂ, ಚಪ್ಪಲಿಗಳು ಮಂಗಮಾಯ ಮಾಡುತ್ತಿದ್ದ ಚಪ್ಪಲಿ ಚೋರರು. ಖದೀಮರನ್ನು ಬಂಧಿಸಿದಾಗ ಪೊಲೀಸರೇ ಶಾಕ್ ಆಗಿದ್ದಾರೆ.
ಮನೆಯಲ್ಲಿ ಬರೋಬ್ಬರಿ 750 ಜೊತೆ ಬ್ರಾಂಡೆಂಡ್ ಶೂ ಮತ್ತು ಚಪ್ಪಲಿಗಳು ಪತ್ತೆಯಾಗಿವೆ. ಎಲ್ಲವನ್ನೂ ವಶಕ್ಕೆ ಪಡೆದುಕೊಂಡ ಪೊಲೀಸರು. ಸದ್ಯ ಆರೋಪಿಗಳನ್ನು ಬಂಧಿಸಿದ್ದು, ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಕದ್ದ ಮಾಲು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಾಗಿದೆ.