ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರಿಗೆ ‘ಸೀನೆ ಮೆ ಗೋಲಿ ಮಾರೋ’ ಎಂಬ ಧಮಕಿ ಕೊಡುವ ಪುಂಡರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಉಮರ ಫಾರೂಕ ಹುಬ್ಬಳ್ಳಿಯವರ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಮರ ಫಾರೂಕ ಹುಬ್ಬಳ್ಳಿ ಮಾತನಾಡಿ, ಕಾಂಗ್ರೆಸ್ ಪಕ್ಷ ಭಾರತದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಪಕ್ಷವಾಗಿದೆ. ದೇಶಕ್ಕಾಗಿ ಸೇವೆ ಸಲ್ಲಿಸುವಾಗ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಹತ್ಯೆಯಾಗಿರುವುದು ಭಾರತೀಯ ಪ್ರಗತಿಪರ ಮನಸ್ಸಿಗೆ ಘಾಸಿಯಾಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅನೇಕ ನಾಯಕರು ಅಸಂಬದ್ಧ, ಅಸಮಂಜಸ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಟೀಕೆ ಮಾಡುವುದು ರಾಜಕೀಯದಲ್ಲಿ ಅವಕಾಶವಿದ್ದರೂ ಆ ಟೀಕೆಯು ಸಾಂವಿಧಾನಿಕವಾಗಿರಬೇಕೆ, ಹೊರತು ಅಶಾಂತಿಯನ್ನು ಉಂಟುಮಾಡುವ ರೀತಿಯಲ್ಲಿ ಇರಬಾರದು.
ಹೀಗಾಗಿ, ಸದರಿ ಶಬ್ಧವನ್ನು ಉಚ್ಛಾರಿಸಿದ ಬಿಜೆಪಿ ನಾಯಕರನ್ನು ಮತ್ತು ಅವರನ್ನು ಬೆಂಬಲಿಸುವವರ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಇರ್ಫಾನ್ ಡಂಬಳ, ಖಾಲಿದ್ ಕೊಪ್ಪಳ, ಸಂಯೋಜಕರಾದ ಎಂ.ಬಿ. ನದಾಫ್ ವಕೀಲರು, ಉಮರ್ ಫಾರುಖ್ ಬಾರಿಗಿಡದ, ಸಾಮಾಜಿಕ ಜಾಲತಾಣದ ಜಿಲ್ಲಾ ಅಧ್ಯಕ್ಷ ರಮೇಶ್ ಹೊನ್ನಿನಾಯ್ಕರ್, ಸಲೀಮ್ ಬಳ್ಳಾರಿ, ಮಹಬುಬ್ ಲಕ್ಷೇಮೇಶ್ವರ, ಸರಫ್ರಾಜ್ ಬಬರ್ಚಿ, ನಿಜಾಮುದ್ದಿನ್ ಮುಂತಾದವರು ಉಪಸ್ಥಿತರಿದ್ದರು.



