ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಚಿನ್ನಾಭರಣ ದೋಚಿದ್ದ ದಂಪತಿ ಅರೆಸ್ಟ್.!

0
Spread the love

ಮೈಸೂರು: ಮೈಸೂರಿನ ಹೆಬ್ಬಾಳದ ಒಂದನೇ ಹಂತದಲ್ಲಿ ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದು ಮನೆ ಒಡತಿಯನ್ನು ಕಟ್ಟಿ ಹಾಕಿ ಚಿನ್ನಾಭರಣ  ದೋಚಿ ಪರಾರಿಯಾಗಿದ್ದ ಖತರ್ನಾಕ್‌ ದಂಪತಿಗಳನ್ನು ಮೈಸೂರಿನ ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ವನಿತಾ (24) ಹಾಗೂ ಚೇತನ್‌ (29) ಬಂಧಿತ ದಂಪತಿಯಾಗಿದ್ದು, ಜುಲೈ 10 ರಂದು ಮೈಸೂರಿನ ಹೆಬ್ಬಾಳದ ಒಂದನೇ ಹಂತದಲ್ಲಿ ವಾಸವಿರುವ ನಿವೃತ್ತ ಶಿಕ್ಷಕಿ ಶಾಂತಮ್ಮ ಅವರ ಖಾಲಿಯಿದ್ದ ಮಹಡಿ ಮನೆ ಬಾಡಿಗೆ ಕೇಳುವ ನೆಪದಲ್ಲಿ ದಂಪತಿ ಬಂದಿದ್ದರು.

Advertisement

ಮನೆ ಹುಡುಕಿ ತುಂಬಾ ಸುಸ್ತಾಗಿದೆ ಸ್ವಲ್ಪ ಸಮಯ ಇಲ್ಲೇ ವಿ‍ಶ್ರಾಂತಿ ಪಡೆಯುತ್ತೇವೆ ಎಂದು ಹೇಳಿ ಮನೆಯಲ್ಲಿ ಉಳಿದುಕೊಂಡಿದ್ದರು. ಬಳಿಕ ಮನೆಯ ಯಜಮಾನಿ ಶಾಂತಮ್ಮ ಮಾರುಕಟ್ಟೆ ಹೋಗಿ ಅರ್ಧ ಗಂಟೆ ನಂತರ ಮನೆಗೆ ವಾಪಸ್​ ಆಗಿದ್ದರು. ಮನೆಗೆ ಬಂದ ಶಾಂತಮ್ಮನಿಗೆ ನಾವು ಟ್ರೈನ್​ಗೆ ಹೋಗುತ್ತೇವೆ, ಕುಡಿಯಲು ನೀರು ತರುವಂತೆ ಹೇಳಿದ್ದರು.

ನೀರು ತರಲು ಹೋದ ಶಾಂತಮ್ಮನ ಹಿಂದೆ ಹೋದ ಚೇತನ್‌, ಅವರನ್ನು ಹಿಡಿದು ಕಟ್ಟಿ ಹಾಕಿ ಮೈ ಮೇಲೆ ಇದ್ದ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿದ್ದರು. ಘಟನೆ ಸಂಬಂಧ ಶಾಂತಮ್ಮನ ಸೊಸೆ ಹೆಬ್ಬಾಳ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಖತರ್ನಾಕ್‌ ದಂಪತಿಯನ್ನು ಬಂಧಿಸಿದರು.


Spread the love

LEAVE A REPLY

Please enter your comment!
Please enter your name here