ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಶೀಟರ್ & ಗ್ಯಾಂಗ್ ದಾಂಧಲೆ ಪ್ರಕರಣ ಹಿನ್ನೆಲೆಯಲ್ಲಿ ಆರ್ ಟಿ. ಪೊಲೀಸರಿಂದ ರೌಡಿಶೀಟರ್ ಬೋಡ್ಕೆ ಇಮ್ರಾನ್ ಅರೆಸ್ಟ್ ಮಾಡಲಾಗಿದೆ.
ಡಿಜೆ.ಹಳ್ಳಿ ಠಾಣಾ ವ್ಯಾಪ್ತಿಯ ಮೋದಿ ರೋಡ್ ನಲ್ಲಿ ನಡೆದಿದ್ದ ಘಟನೆ ಕೆಲವು ದಿನಗಳ ಹಿಂದೆ ಬಾರ್ ಗೆ ನುಗ್ಗಿ ಲಾಂಗ್ ತೋರಿಸಿ ದಾಂದಲೆ ಮಾಡಿದ್ದ ಇಮ್ರಾನ್ ಅಂಡ್ ಗ್ಯಾಂಗ್, ಬಳಿಕ ಬೀಡಾ ಅಂಗಡಿ ಮಾಲೀಕನಿಗೆ ಲಾಂಗ್ ತೋರಿಸಿ ಹಣ ವಸೂಲಿ ಮಾಡಿತ್ತು.
ಅಷ್ಟೇ ಅಲ್ಲದೇ ಮೋದಿ ರೋಡ್ ನಲ್ಲಿ ನಿಲ್ಲಿಸಿದ್ದ ಕಾರ್, ಆಟೋ ಜಖಂ ಮಾಡಿದ್ದ ಕಿಡಿಗೇಡಿಗಳು ಸಿಸಿಟಿವಿಯಲ್ಲಿ ರೌಡಿಶೀಟರ್ ಲಾಂಗ್ ಬಿಸೋ ಕೃತ್ಯ ಸೆರೆಯಾಗಿತ್ತು. ಟ್ಯಾಂಕ್ ಮುಲ್ಲಾ , ಹುಸೇನಾ ಮಸೀದಿ , ಪಿಎನ್ ಟಿ ಸರ್ಕಲ್ ನಲ್ಲೂ ಕೃತ್ಯ ಎಸಗಿದ್ರು. ಬೀಡಾ ಅಂಗಡಿ ಮಾಲೀಕ ಶಿವಣ್ಣ ಬಳಿ ಲಾಂಗ್ ತೋರಿಸಿ 6 ಸಾವಿರ ಕಸಿದು ಪರಾರಿಯಾಗಿದ್ರು.
ಸದ್ಯ ಆರೋಪಿಯನ್ನ ಬಂಧಿಸಿರುವ ಅರ್ ಟಿ. ನಗರ ಪೊಲೀಸರು ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.