ಏಷ್ಯಾಕಪ್‌ಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ಅರ್ಷದೀಪ್ ಸಿಂಗ್ ಮತ್ತು ಕುಲ್ದೀಪ್ ಯಾದವ್ ಅವರನ್ನು ದುಲೀಪ್ ಟ್ರೋಫಿ ಸೆಮಿಫೈನಲ್‌ನಿಂದ ಹೊರಗಿಡಲಾಗಿದೆ.
ದುಲೀಪ್ ಟ್ರೋಫಿಯ ಸೆಮಿಫೈನಲ್ ಸುತ್ತು ಸೆಪ್ಟೆಂಬರ್ 4 ರಿಂದ ಬೆಂಗಳೂರಿನಲ್ಲಿ ಆರಂಭವಾಗುತ್ತಿದೆ. ಇತ್ತ ಟೀಂ ಇಂಡಿಯಾ ಕೂಡ ಏಷ್ಯಾಕಪ್‌ಗಾಗಿ ನಾಳೆಯೇ ಯುಎಇಗೆ ಪ್ರಯಾಣ ಬೆಳೆಸುತ್ತಿದೆ. ಹೀಗಾಗಿ ಕುಲ್ದೀಪ್ ಯಾದವ್ ಹಾಗೂ ಅರ್ಷ್‌ದೀಪ್ ಏಷ್ಯಾಕಪ್ ತಂಡದಲ್ಲಿರುವುದರಿಂದ ಇವರಿಬ್ಬರನ್ನು ತಂಡದಿಂದ ಕೈಬಿಡಲಾಗಿದೆ.
ಕುಲ್ದೀಪ್ ಯಾದವ್ ಮತ್ತು ಅರ್ಷದೀಪ್ ಸಿಂಗ್ ಇಬ್ಬರೂ ಏಷ್ಯಾಕಪ್‌ನಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಹೀಗಾಗಿ ಇವರಿಬ್ಬರು ಸೆಪ್ಟೆಂಬರ್ 4 ರಂದು ತಂಡದೊಂದಿಗೆ ದುಬೈಗೆ ಹೊರಡಬೇಕಾಗಿದೆ.
ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯಗಳು ಸೆಪ್ಟೆಂಬರ್ 4 ರಿಂದಲೇ ನಡೆಯಲಿವೆ. ಇದೇ ಕಾರಣಕ್ಕೆ ಕುಲ್ದೀಪ್ ಯಾದವ್ ಮಧ್ಯ ವಲಯದಿಂದ ಅಥವಾ ಉತ್ತರ ವಲಯದಿಂದ ಅರ್ಷದೀಪ್ ಸಿಂಗ್ ಇಬ್ಬರೂ ಆಡುತ್ತಿಲ್ಲ. ದುಲೀಪ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ, ಉತ್ತರ ವಲಯವು ದಕ್ಷಿಣ ವಲಯದ ವಿರುದ್ಧ ಆಡಲಿದೆ. ಎರಡನೇ ಸೆಮಿಫೈನಲ್‌ನಲ್ಲಿ, ಕೇಂದ್ರ ವಲಯ ತಂಡವು ಪಶ್ಚಿಮ ವಲಯವನ್ನು ಎದುರಿಸಲಿದೆ.