ವಿಜಯಸಾಕ್ಷಿ ಸುದ್ದಿ, ಗದಗ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಲಘು ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ ಹಿರೇಮಾಗಿ ಸಂಘ ಇವರು ಕೊಡಮಾಡುವ 2025ನೇ ಸಾಲಿನ ಮೊಗ್ಗಿಮಯಾದೇವರ ಪ್ರಶಸ್ತಿಯನ್ನು ಸಮಾಜಿಕ ಹೋರಾಟಗಾರ, ಜನಪದ ಕಲಾವಿದ ಗವಿಶಿದ್ಧಯ್ಯ ಹಳ್ಳಿಕೇರಿಮಠರಿಗೆ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಕೂಡಲಗಿ ಸಂಸ್ಥಾನ ಹೀರೆಮಠದ ಶ್ರೀ ಜಗದ್ಗುರು ಡಾ. ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು, ಪುರತಗೇರಿ ಹಿರೇಮಠದ ಶ್ರೀ ಷ.ಬ್ರ. ಅಭಿನವ ಕೈಲಾಸಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ವೇ.ಮೂ. ನಾಗರಾಜ ಹೀರೆಮಠ, ಶ್ರೀ ಚನ್ನಬಸಪ್ಪ ಅಜ್ಜನವರು, ಶ್ರೀ ಕೆಂಚಪ್ಪ ಅಜ್ಜನವರು, ಶ್ರೀ ಪ್ರಾಣೇಶ ಅಜ್ಜನವರು, ಶ್ರೀ ಕೃಷ್ಣಾ ಅಜ್ಜನವರು, ನಾಗಣ್ಣ ಬಾದವಾಡಗಿ, ಯಮನಪ್ಪ ಎಮ್ಮೆಟ್ಟಿ, ಹನುಮಂತ ಎಮ್ಮೆಟ್ಟಿ, ಮುತ್ತು ವಡ್ಡರ, ರಮನಗೌಡ ಕೆಸರಪೆಂಟಿ, ನೀಲ್ಲಪ್ಪ ತೆಗ್ಗಿ ಮುಂತಾದವರು ಪಾಲ್ಗೊಂಡಿದ್ದರು.


