ಆಗಸ್ಟ್ 1ರಂದು ಬಿಡುಗಡೆಯಾದ ‘ಕೊತ್ತಲವಾಡಿ’ ಸಿನಿಮಾ ಇದೀಗ ವಿವಾದಕ್ಕೆ ಗುರಿಯಾಗಿದೆ. ಯಶ್ ತಾಯಿ ಪುಷ್ಪ ನಿರ್ಮಾಣದ ಈ ಸಿನಿಮಾ ಥಿಯೇಟರ್ ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡಲಿಲ್ಲ. ಇದೀಗ ಈ ಸಿನಿಮಾದ ಬಗ್ಗೆ ಕಲಾವಿದರೊಬ್ಬರು ಆರೋಪ ಮಾಡಿದ್ದಾರೆ.
ಸಾಕಷ್ಟು ಅದ್ದೂರಿಯಾಗಿ ರಿಲೀಸ್ ಆದ ಕೊತ್ತಲವಾಡಿ ಸಿನಿಮಾ ಅಂದುಕೊಂಡ ಮಟ್ಟಿಗೆ ಸದ್ದು ಮಾಡಲಿಲ್ಲ. ಯಶ್ ತಾಯಿ ಪುಷ್ಪ ಚಿತ್ರದ ನಿರ್ಮಾಪಕರಾಗಿದ್ದು, ಪೃಥ್ವಿ ಅಂಬರ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಚಿತ್ರದ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಂಗಭೂಮಿ ಹಾಗೂ ಚಿತ್ರರಂಗದ ಕಲಾವಿದ ಮಹೇಶ್ ಗುರು ಅವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
“ನನ್ನ ಹೆಸರು ಮಹೇಶ್ ಗುರು. ನಾನು ರಂಗಭೂಮಿಯಿಂದ ಬಂದ ಕಲಾವಿದ. ಸಿನಿಮಾಗಳಲ್ಲಿಯೂ, ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದೇನೆ. ‘ಕೊತ್ತಲವಾಡಿ’ ಚಿತ್ರದಲ್ಲಿ ನಾನು ನಟಿಸಿದ್ದೇನೆ. ಮೂರು ತಿಂಗಳಿಗೂ ಹೆಚ್ಚು ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೆ. ಸಿನಿಮಾ ಆಗಸ್ಟ್ 1ರಂದು ಬಿಡುಗಡೆಯಾಯಿತು. ಈಗ ಅದು OTTಗೂ ಬಂದಿದೆ. ಆದರೆ, ನನಗೆ ಹಾಗೂ ಇತರ ಕೆಲ ಕಲಾವಿದರಿಗೆ ಇನ್ನೂ ಪೇಮೆಂಟ್ ಆಗಿಲ್ಲ.”
ಈ ಚಿತ್ರಕ್ಕೆ ನಾನು ಸೆಲೆಕ್ಟ್ ಆಗಿದ್ದು, ನಿರ್ದೇಶಕರ ಕಡೆಯಿಂದ. ಪ್ರೊಡೆಕ್ಷನ್ ಕಡೆಯಿಂದಾಗಲಿ, ಮ್ಯಾನೇಜರ್ ಕಡೆಯಿಂದಾಗಲಿ ನಾನು ಬಂದಿಲ್ಲ. ನೇರವಾಗಿ ನಿರ್ದೇಶಕರು ನಮಗೆ ಒಂದು ಪ್ಯಾಕೇಜ್ ಮಾತನ್ನಾಡಿದ್ದರು. ತಿಂಗಳಿಗೆ ಇಷ್ಟು ಹಣ ಹಾಗೂ ದಿನಕ್ಕೆ ಕನ್ವಿನ್ಸ್ ಕೂಡ ಇರುತ್ತದೆ ಎಂದಿದ್ದರು. ನಾವು ಖುಷಿಯಿಂದ ಒಪ್ಪಿಕೊಂಡೆವು. ಸಿನಿಮಾ ಮುಹೂರ್ತ ಕೂಡ ಆಯಿತು. ಈ ವೇಳೆ ಪೇಮೆಮಟ್ ಕೇಳಿದೇವು. ನಿರ್ದೇಶಕರ ಜೊತೆ ಮಾತನ್ನಾಡುವಾಗ ಮೂಹರ್ತದ ಬಳಿಕ ಒಂದು ಅಡ್ವಾನ್ಸ್ ಮಾಡಿಸ್ತೇನೆ ಅಂದಿದ್ದರು.
ಕೊನೆಗೆ ನಮ್ಮ ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ. ಸಿನಿಮಾ ಟೀಸರ್, ಪ್ರೆಸ್ಮೀಟ್, ಸಿನಿಮಾ ಪ್ರಚಾರ ಎಲ್ಲವೂ ನಡೆಯಿತು. ಅದ್ಯಾವುದಕ್ಕೂ ನಮ್ಮನ್ನ ಕರೆಯಲಿಲ್ಲ. “ಈ ವಿಷಯ ಯಶ್ ತಾಯಿಗೆ ತಲುಪಬೇಕು ಎಂಬುದು ನನ್ನ ಆಶಯ. ನಾವು ಮಾಡಿದ ಕೆಲಸಕ್ಕೆ ನಮಗೆ ಯೋಗ್ಯ ಪಾವತಿ ಸಿಗಬೇಕು.” ಎಂದು ಮಹೇಶ್ ಗುರು ಮನವಿ ಮಾಡಿದ್ದಾರೆ.