ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ವಿಧಾನಸಭೆಯುಲ್ಲಿ ಪ್ರಸ್ತಾಪ ಮಾಡಿದ ವಿರೋಧ ಪಕ್ಷದ ನಾಯಕ ಅಶೋಕ್, ಶಾಸಕ ಹೆಚ್.ಡಿ.ರೇವಣ್ಣ ಬಂಧನದ ಬಗ್ಗೆ ಉಲ್ಲೇಖಿಸಿದರು. ವಾಲ್ಮೀಕಿ ನಿಗಮ ಕೇಸ್ನಲ್ಲಿ ನೋಟಿಸ್ ಕೊಟ್ಟು ಕರೆದೇ ಇಲ್ಲ. ರೇವಣ್ಣ, ಭವಾನಿ ಪ್ರಕರಣದಲ್ಲಿ ಎಸ್ಐಟಿ ತುಂಬಾ ಸ್ಟ್ರಾಂಗ್ ಇದ್ರು. ಎಷ್ಟು ಸ್ಟ್ರಾಂಗ್ ಅಂದರೆ ಎರಡೇ ದಿನದಲ್ಲಿ ಅರೆಸ್ಟ್ ಮಾಡಿದರು.
ಮಾಜಿ ಶಾಸಕ ಪ್ರೀತಂಗೌಡ ಕೇಸ್ನಲ್ಲೂ ಹಾಗೆ ಆಯಿತು. ವಾಲ್ಮೀಕಿ ನಿಗಮ ಕೇಸ್ನಲ್ಲಿ ಇನ್ನೂ ನೋಟಿಸ್ ಸಹ ಕೊಟ್ಟಿಲ್ಲ. ಎಸ್ಐಟಿ ಕಚೇರಿಯಲ್ಲಿ 8 ಗಂಟೆಗಳ ಕಾಲ ಕೂರಿಸಿದ್ದರು. ಏನು ವಾಲ್ಮೀಕಿ ರಾಮಾಯಣ ಓದಲು ಕೂರಿಸಿದ್ದರಾ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಪ್ರಶ್ನೆ ಮಾಡಿದರು.
ಇದೇ ವೇಳೆ ಮಾತನಾಡಿದ ಶಾಸಕ ಹೆಚ್.ಡಿ.ರೇವಣ್ಣ ಬಂಧನದ ಬಗ್ಗೆ ಉಲ್ಲೇಖಿಸಿದ ಅಶೋಕ್, ಹಾಗಾದರೆ ರೇವಣ್ಣ ಪ್ರಕರಣ ಇದಕ್ಕಿಂತ ಕಡಿಮೆಯಾ? ಎಂದು ಪ್ರಶ್ನೆ ಮಾಡಿದರು. ಈ ಪ್ರಕರಣ ಇಡೀ ಪ್ರಪಂಚಕ್ಕೆ ಮುಜುಗರ ಆಗಿದೆ ಎಂದು ಸದನದಲ್ಲಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಹೇಳಿದರು.