ಏಷ್ಯಾ ಕಪ್ 2025 ರಲ್ಲಿ ಪಾಕಿಸ್ತಾನ ತಂಡವು ಓಮನ್ ತಂಡವನ್ನು 93 ರನ್ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ, ಪಾಕಿಸ್ತಾನ ತಂಡವು ಮೊದಲು ಬ್ಯಾಟಿಂಗ್ ಮಾಡಿ 160 ರನ್ಗಳನ್ನು ಗಳಿಸಿದರೆ ಇದಕ್ಕೆ ಪ್ರತಿಯಾಗಿ, ಇಡೀ ಓಮನ್ ತಂಡವು ಕೇವಲ 67 ರನ್ಗಳಿಗೆ ಆಲೌಟ್ ಆಗಿತ್ತು.
ಹೌದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ಹ್ಯಾರಿಸ್ 43 ಎಸೆತಗಳಲ್ಲಿ 66 ರನ್ ಗಳಿಸಿದರೂ, ಪಾಕಿಸ್ತಾನಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ಆರಂಭಿಕ ಬ್ಯಾಟ್ಸ್ಮನ್ಗಳಾದ ಸೈಮ್ ಅಯೂಬ್ ಮತ್ತು ನಾಯಕ ಸಲ್ಮಾನ್ ಅಘಾ ಗೋಲ್ಡನ್ ಡಕ್ಗೆ ಔಟಾದರು. ಸಹೀಬ್ಜಾದ ಫರ್ಹಾನ್ (29), ಹಸನ್ ನವಾಜ್ (9), ಮೊಹಮ್ಮದ್ ನವಾಜ್ (19), ಫಹೀಮ್ ಅಶ್ರಫ್ (8), ಫಖರ್ ಜಮಾನ್ (23*), ಶಾಹೀನ್ ಅಫ್ರಿದಿ (2*) ರನ್ ಗಳಿಸಿದರು. ಒಮಾನ್ ಪರ ಶಾ ಫೈಸಲ್ ಮತ್ತು ಆಮಿರ್ ಕಲೀಮ್ ತಲಾ ಮೂರು ವಿಕೆಟ್ ಪಡೆದರು. ಮೊಹಮ್ಮದ್ ನದೀಮ್ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಒಮಾನ್ ಆರಂಭದಿಂದಲೇ ಪಾಕಿಸ್ತಾನದ ಬೌಲರ್ಗಳ ಒತ್ತಡಕ್ಕೆ ಸಿಲುಕಿತು. ಸೈಮ್ ಅಯೂಬ್ ಮತ್ತು ಸುಫಿಯಾನ್ ಮುಖೀಮ್ ನಿರಂತರವಾಗಿ ವಿಕೆಟ್ ಪಡೆದರು. ಒಮಾನ್ ನಾಯಕ ಜಿತೇಂದರ್ ಸಿಂಗ್ (1), ಆಮಿರ್ ಕಲೀಮ್ (13), ಮೊಹಮ್ಮದ್ ನದೀಮ್ (3), ಸುಫ್ಯಾನ್ ಮೆಹಮೂದ್ (1) ರನ್ ಗಳಿಸಿ ಔಟಾದರು.
ವಿಕೆಟ್ ಕೀಪರ್ ವಿನಾಯಕ್ ಶುಕ್ಲಾ (2) ರನ್ ಔಟ್ ಆದರು. ಹಮ್ಮದ್ ಮಿರ್ಜಾ (27), ಶಾ ಫೈಸಲ್ (1), ಸಿಕಂದರ್ ಇಸ್ಲಾಂ (0), ಹಸ್ನೈನ್ ಶಾ (1), ಶಕೀಲ್ ಅಹ್ಮದ್ (10), ಸಮಯ್ ಶ್ರೀವಾಸ್ತವ (5*) ರನ್ ಗಳಿಸಿದರು. ಕೇವಲ ಮೂರು ಒಮಾನ್ ಬ್ಯಾಟ್ಸ್ಮನ್ಗಳು ಮಾತ್ರ ಎರಡಂಕಿ ರನ್ ಗಳಿಸುವಲ್ಲಿ ಯಶಸ್ವಿಯಾದರು. ಇನ್ನುಳಿದಂತೆ ಉಳಿದೆಲ್ಲಾ ಬ್ಯಾಟರ್ಗಳು ಪಾಕ್ ದಾಳಿಗೆ ತತ್ತರಿಸಿ ಪೆವಿಲಿಯನ್ ಪೆರೇಡ್ ನಡೆಸಿದರು.