ಚಿತ್ರದುರ್ಗ: ಕಳೆದ ನಾಲ್ಕು ತಿಂಗಳಿಂದ ಇದೇ ಪ್ರಶ್ನೆ ಕೇಳುತ್ತಿದ್ದಿರಿ, ಕೈಮುಗಿದು ಕೇಳುತ್ತೇನೆ ಇದನ್ನ ಕೈಬಿಡಬೇಕಿದೆ. ಹೈಕಮಾಂಡ್ & MLA ಗಳು ನಿರ್ಧಾರ ಮಾಡುತ್ತಾರೆ ಎಂದು ಚಿತ್ರದುರ್ಗದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲಾ ಹೈಕಮಾಂಡ್ ಹಂತದಲ್ಲಿ ಚರ್ಚೆ ನಡೆಯುತ್ತದೆ. ಸಿಎಂ ಹೇಳಿದ್ದು ಐದು ವರ್ಷ ಕಂಟಿನ್ಯೂ ಎಂದಿದ್ದಾರೆ.
ಯಾವುದೇ ಬದಲಾವಣೆ ಇದ್ದರು ಹೈಕಮಾಂಡ್ ಮಾಡಬೇಕಿದೆ. ಸಿಎಂ ಸಿದ್ದರಾಮಯ್ಯ 2.5 ವರ್ಷ ಸಿಎಂ ಎಂಬ ವಿಚಾರಕ್ಕೆ ತೆರೆ ಎಳೆದಿದ್ದಾರೆ.
ಪುನಃ ಮತ್ತೆ ನಮಗೆ ಪ್ರಶ್ನೆ ಮಾಡುವುದು ಅಗತ್ಯವಿಲ್ಲ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ಅವರವರ ಅಭಿಪ್ರಾಯ ಹೇಳಿದ್ದಾರೆ. ಪಕ್ಷದಲ್ಲಿ ಗೊಂದಲ ಇಲ್ಲ, ಅಭಿಪ್ರಾಯ ಇದೆ.
ಬಿಜೆಪಿ ಅವರಿಗೆ ಅಪರೇಷನ್ ಕಮಲ ಅವ್ಯಾಸವಾಗಿದೆ. ED , CBI, ಬಳಸಿ ಸರ್ಕಾರ ಕೆಡವುತ್ತಾರೆ. ಯಾವುದೇ ಪ್ರಕರಣ ಇರುವ ವ್ಯಕ್ತಿ ಬಿಜೆಪಿಗೆ ಹೋದರೆ ವಾಷಿಂಗ್ ಪೌಡರ್ ನಿರ್ಮ ಇದ್ದಾರೆ. ನನ್ನ ಬಳಿ ಈ ಕುರಿತು ಊಹಾಪೋಹಗಳ ಮಾಹಿತಿ ಇದೆ ಎಂದು ಹೇಳಿದರು.