ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ಬಿ.ಜಿ. ಅಣ್ಣೀಗೇರಿ ಗುರುಗಳ ಸಂಸ್ಕೃತ ಪಾಠಶಾಲೆ ಹಾಗೂ ಕಣವಿ ಹೊಸೂರ ಗ್ರಾಮಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ಕಣವಿ ಗ್ರಾಮದ ಶ್ರೀ ಹನುಮಂತದೇವರ ದೇವಸ್ಥಾನ ಹಾಗೂ ಶ್ರೀ ಕೆ.ಜಿ.ವ್ಹಿ.ಎಸ್. ಶಾಲೆಗಳಲ್ಲಿ `ಅಸ್ಮಾಕಂ ಸಂಸ್ಕೃತಂ’ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಧಾರವಾಡ ವಲಯ ವಿಷಯ ಪರಿವೀಕ್ಷಕರಾದ ವಿದ್ವಾನ್ ಗಣಪತಿ ಎಸ್.ಗಾಂವಕರ ಸರಣಿ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡುತ್ತಾ, ಸಂಸ್ಕೃತ ಭಾಷೆಯ ಮಹತ್ವ ಹಾಗೂ ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳವರ ಸಂಸ್ಕೃತ ಪಾಂಡಿತ್ಯವನ್ನು ಕುರಿತು ಮಕ್ಕಳಿಗೆ ಮನಮುಟ್ಟುವಂತೆ ಉಪನ್ಯಾಸ ನೀಡಿದರು.
ಸಂಸ್ಕೃತ ಪಾಠಶಾಲೆಯ ಸಂಸ್ಕೃತ ಶಿಕ್ಷಕರು ಹಾಗೂ ಗಡಿನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ವೇ.ಮೂ. ಶಿವಚಲಕುಮಾರ ಎಸ್.ಸಾಲಿಮಠ, ಅಧ್ಯಕ್ಷತೆ ವಹಿಸಿದ್ದ ಎನ್.ಎಸ್. ಆಲೂರ ಮಾತನಾಡಿದರು.
ಶ್ರೀ ಹನುಮಂತ ದೇವರ ದೇವಸ್ಥಾನದಿಂದ ಕೆ.ಜಿ.ವ್ಹಿ.ಎಸ್. ಶಾಲೆಯವರೆಗೆ ಸಂಸ್ಕೃತ ಶೋಭಾ ಯಾತ್ರೆ, ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಕೆ.ಎಸ್. ಕುರ್ತಕೋಟಿ, ಅಣ್ಣಿಗೇರಿ ಗುರುಗಳ ಆಶ್ರಮದ ವ್ಯವಸ್ಥಾಪಕ ಶಂಕರಪ್ಪ ಅಣ್ಣಿಗೇರಿ, ಕೆ.ಜಿ.ವ್ಹಿ.ಎಸ್. ಶಾಲೆಯ ಮುಖ್ಯಸ್ಥರಾದ ನಿಜಗುಣಶಿವಯೋಗಿ ಎಸ್.ಆಲೂರ, ದೇಶಪಾಂಡೆ ಫೌಂಡೇಶನ್ ಎಸ್.ಐ.ವಿ ಶಾಖೆಯ ಗದಗ ಮುಖ್ಯಸ್ಥರಾದ ದರ್ಶನಾ ಸುಲಾಖೆಯವರು, ಶಾಲಾ ಶಿಕ್ಷಕ ಅರುಣ ಕಲ್ಲನಗೌಡ್ರ, ಯಲ್ಲಪ್ಪ ಕಲ್ಯಾಣಿಯವರು, ಜಿ.ಟಿ. ಸಂಸ್ಕೃತ ಪಾಠಶಾಲೆಯ ಮುಖ್ಯೋಪಾಧ್ಯಾಯ ಎಸ್.ಎನ್. ಶಿಂಪಿಗೇರ, ಎಸ್.ಎಸ್. ನೀಲಗುಂದ, ವಿಜಯಲಕ್ಷ್ಮೀ ಪಟ್ಟಣಶೆಟ್ಟಿ, ಮಹಾಂತೇಶ, ಸುರೇಶ, ಕಾಶೀ ಪಾಠಶಾಲೆಯ ಮುಖ್ಯೋಪಾಧ್ಯಾಯ ವೇ.ಮೂ. ಗುರುಸಿದ್ಧಯ್ಯನವರು ಹಿರೇಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯೆ ತೇಜಸ್ವಿನಿ ಕುರ್ತಕೋಟಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.