ಸಂಸ್ಕೃತ ಎಲ್ಲ ಭಾಷೆಗಳ ತಾಯಿ : ಜಿ.ಎಸ್. ಗಾಂವಕರ ಡಿ.ಜಿ.

0
``Asmakam Sanskritam'' serial program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಡಿ.ಜಿ. ಮೇಲ್ಮಾಳಗಿ ಸಂಸ್ಕೃತ ಪಾಠಶಾಲೆ ಗದಗ ಮತ್ತು ಪಂಡಿತ ಪಂಚಾಕ್ಷರ ಗವಾಯಿಗಳವರ ಶಿಕ್ಷಣ ಮಹಾವಿದ್ಯಾಲಯ ಗದಗ ಇವರ ಸಹಯೋಗದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ `ಅಸ್ಮಾಕಂ ಸಂಸ್ಕೃತಂ’ ಸರಣಿ ಕಾರ್ಯಕ್ರಮ ನಡೆಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂ. ಪಂಚಾಕ್ಷರ ಗವಾಯಿಗಳವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವ್ಹಿ.ಎ. ಹಿತ್ತಲಮನಿ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಉಪಸ್ಥಿತಿ ವಹಿಸಿದ್ದ ಮೇಲ್ಮಾಳಗಿ ಸಂಸ್ಕೃತ ಪಾಠಶಾಲೆಯ ಮುಖ್ಯೋಪಾಧ್ಯಾಯ ಜಿ.ಎಸ್. ಗಾಂವಕರ ಡಿ.ಜಿ. ಮಾತನಾಡಿ, ಜಗತ್ತಿನ ಎಲ್ಲ ಭಾಷೆಗೆ ತಾಯಿ ಭಾಷೆ ಸಂಸ್ಕೃತ. ಭಾರತೀಯ ಸಂಸ್ಕೃತಿಯ ರಾಮಾಯಣ, ಮಹಾಭಾರತ ಮತ್ತು ಮಹಾ ಕಾವ್ಯಗಳೂ ಸಂಸ್ಕೃತ ಭಾಷೆಯಲ್ಲಿಯೇ ಇರುವದರಿಂದ ಸಂಸ್ಕೃತ ತಾಯಿ ಭಾಷೆಯಾಗಿದೆ ಎಂದರು.

ಎಸ್.ಎಸ್. ಸಾಲಿಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಂ. ಪಂಚಾಕ್ಷರ ಗವಾಯಿಗಳವರ ಶಿಕ್ಷಣ ಮಹಾವಿದ್ಯಾಲಯದ ಎಲ್ಲ ಸಹ ಶಿಕ್ಷಕರು, ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಬಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ರೇಷ್ಮಾ ಬಳಿಗಾರ, ಪ್ರಾರ್ಥಣೆಯನ್ನು ಮೇಘಾ, ಸ್ವಾಗತವನ್ನು ರಾಘವೇಂದ್ರ ತೆಗ್ಗಿನಮನಿ, ಪುಷ್ಪಾರ್ಪಣೆಯನ್ನು ಸವಿತಾ ಶ್ಯಾವಿ, ವಂದನಾರ್ಪಣೆಯನ್ನು ಸಾವಿತ್ರಿ ನೆರವೇರಿಸಿದರು.


Spread the love

LEAVE A REPLY

Please enter your comment!
Please enter your name here