ಮಲಯಾಳಂನ ಯುವ ನಟ ಉನ್ನಿ ಮುಕುಂದನ್ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ಉನ್ನಿ ಮುಕುಂದನ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅವರ ಮಾಜಿ ಮ್ಯಾನೇಜರ್ ವಿಪಿನ್ ಕುಮಾರ್ ಕೊಚ್ಚಿ ಪೊಲೀಸರಿಗೆ ದೂರು ನೀಡಿದ್ದಾರೆ.
ಟೋವಿನೋ ಥಾಮಸ್ ನಟನೆಯ ‘ನರಿವೆಟ್ಟ’ ಸಿನಿಮಾ ಬಗ್ಗೆ ಮೆಚ್ಚಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ನಟ ಉನ್ನಿ ತಮಗೆ ಕಪಾಳಮೋಕ್ಷ ಮಾಡಿದ್ದಲ್ಲದೇ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಮ್ಯಾನೇಜರ್ ಉಲ್ಲೇಖಿಸಿದ್ದಾರೆ.
ಕೊಚ್ಚಿ ಇನ್ಫೋ ಪಾರ್ಕ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸೋದರ ಜೊತೆಗೆ ಮಲಯಾಳಂ ಕಲಾವಿದರ ಸಂಘದಲ್ಲಿಯೂ ಉನ್ನಿ ಮುಕುಂದನ್ ವಿರುದ್ಧ ಮ್ಯಾನೇಜರ್ ದೂರು ನೀಡಿರೋದಾಗಿ ತಿಳಿಸಿದ್ದಾರೆ.
ನಾನು ಅನೇಕ ಸಿನಿಮಾಗಳಿಗೆ ಪಿಆರ್ ಆಗಿ ಕೆಲಸ ಮಾಡಿದ್ದೇನೆ. ಅದರಂತೆ ‘ನರಿವೆಟ್ಟ’ ಸಿನಿಮಾಗೂ ಪ್ರಚಾರ ಮಾಡಿದ್ದೆ, ಈ ಸಿನಿಮಾ ಬಗ್ಗೆ ಹೊಗಳಿ ಪೋಸ್ಟ್ ಮಾಡಿದ್ದು ಉನ್ನಿ ಮುಕುಂದನ್‌ಗೆ ಇಷ್ಟವಾಗಲಿಲ್ಲ. ಹಾಗಾಗಿ ಮೇ 26ರಂದು ತಮ್ಮ ಫ್ಲಾಟ್‌ನ ಪಾರ್ಕಿಂಗ್ ಏರಿಯಾಗೆ ತಮ್ಮನ್ನು ಕರೆದು ನಟ ಹಲ್ಲೆ ಮಾಡಿರೋದಾಗಿ ಮ್ಯಾನೇಜರ್ ದೂರು ನೀಡಿದ್ದಾರೆ.
ಉನ್ನಿ ಮುಕುಂದನ್ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಅವರು ಈ ಹಿಂದೆ ಲೈಂಗಿಕ ಕಿರುಕುಳ ಪ್ರಕರಣ, ಯೂಟ್ಯೂಬರ್‌ಗೆ ಬೆದರಿಕೆ ಮತ್ತು ರಹಸ್ಯ ಏಜೆಂಟ್‌ಗೆ ಸಂಬಂಧಿಸಿದಂತೆ ಆರೋಪಗಳನ್ನು ಎದುರಿಸಿದ್ದಾರೆ.