ಗದಗ: ಹೆಂಡತಿಯನ್ನು ಚುಡಾಯಿಸಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಆರು ಜನರಿಂದ ಹಲ್ಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ನಡೆದಿದೆ.
Advertisement
ಬಾವಿ ಕುಟುಂಬದ ಆರು ಜನರು ರಸ್ತೆಯಲ್ಲಿ ಅಟ್ಟಾಡಿಸಿ ಕೊಡಲಿ, ದೊನ್ನೆಯಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ದೇವರಾಜ, ಭಾಗವ್ವ, ಚಂದ್ರವ್ವ, ಹಾಗೂ ದಾನಪ್ಪ ಎಂಬುವವರಿಗೆ ಗಾಯಗಳಾಗಿವೆ.
ಬಾವಿ ಕುಟುಂಬದ ಬಸವರಾಜ, ರವಿ, ಕೋಟೆಪ್ಪ ಹಾಗೂ ಮುತ್ತಪ್ಪ ಅನ್ನೋರಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ, ದೇವರಾಜ್ ಅವರ ಪತ್ನಿಗೆ ಚುಡಾಯಿಸಿದ್ದ ಕೊಟ್ರೆಪ್ಪನನ್ನು ಪ್ರಶ್ನೆ ಮಾಡಿದಕ್ಕೆ ದೇವರಾಜ್ ಮತ್ತು ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಗಾಯಗೊಂಡ ನಾಲ್ವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.