ವಿಜಯಸಾಕ್ಷಿ ಸುದ್ದಿ, ಗದಗ : ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ವರ ಸಹಾಯ ಅಗತ್ಯವಾಗಿದ್ದು, ಇನ್ನರ್‌ವ್ಹೀಲ್ ಕ್ಲಬ್ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಮಕ್ಕಳ ಕಲಿಕಾ ಸಾಮಗ್ರಿ ವಿತರಿಸಿ ಸಹಾಯಹಸ್ತ ನೀಡಿದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿ ಅಧ್ಯಕ್ಷೆ ನಾಗರತ್ನಾ ಮಾರನಬಸರಿ ಹೇಳಿದರು.
ಅವರು ಮಂಗಳವಾರ ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ನಿಂದ ಗದುಗಿನ ಆಶ್ರಯ ಕಾಲೋನಿಯ ದತ್ತು ಶಾಲೆಯಾದ ಸ.ಹಿ.ಪ್ರಾ.ಕ ಗಂ ಶಾಲೆ ನಂ-12 ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಕ್ಲಬ್ ಸಿಎಲ್‌ಸಿಸಿ ಸುಮಾ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳ ದತ್ತು ಅನ್ವಯ ಶಾಲೆಗೆ ನೀರಿನ ಬಾಟಲ್, ಮಕ್ಕಳಿಗೆ ಕುರ್ಚಿ-ಟೇಬಲ್, ಲೈಬ್ರರಿಗೆ ಬುಕ್ ಸ್ಟ್ಯಾಂಡ್- ಪುಸ್ತಕಗಳು, ಎಲ್ಲಾ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ್ದು ಮುಂದೆಯೂ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದರು.
ಕಲಿಕಾ ಸಾಮಗ್ರಿಗಳ ಪ್ರಾಯೋಜಕತ್ವವನ್ನು ಕ್ಲಬ್‌ನ ಸದಸ್ಯರುಗಳಾದ ಸರೋಜಾದೇವಿ ಆಲೂರ, ಕಮಲಾ ಭೂಮಾ, ಶಾಂತಾ ಗೌಡರ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಪಿಡಿಸಿ ಪ್ರೇಮಾ ಗುಳಗೌಡರ, ಕಾರ್ಯದರ್ಶಿ ವೀಣಾ ತಿರ್ಲಾಪೂರ, ಐಎಸ್‌ಓ ಪುಷ್ಪಾ ಭಂಡಾರಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಹೆಚ್.ಆರ್ ಕೋಣಿಮನಿ, ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ, ಐ.ಹೆಚ್. ಬಳಬಟ್ಟಿ, ಎಸ್.ಬಿ. ಮುಳಗುಂದ, ಎಸ್.ಬಿ. ಕನಿಕೆ, ಚಾಮರಾಜ ಹುಡೇದ, ಎಂ.ಕೆ. ಹುಯಿಲಗೋಳ, ಎಸ್.ವಿ. ವಕ್ಕಳದ, ಜಗದೀಶ ಶೀಲವಂತರ, ಎ.ಎಂ. ಕೆಂಚರೆಡ್ಡಿಯವರ, ವಿ.ಜಿ. ಪಾಟೀಲ, ಎಂ.ಎಸ್. ಬಸರಣ್ಣವರ, ಎಸ್.ಬಿ. ದೊಡ್ಡಮನಿ, ಎಸ್.ಟಿ. ಲಮಾಣಿ ಮುಂತಾದವರಿದ್ದರು.