ಇಂಡಿಗೋ ವಿಮಾನಕ್ಕೆ ಟಿಟಿ ಡಿಕ್ಕಿ: ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ!

0
Spread the love

ಬೆಂಗಳೂರು: ಇಂಡಿಗೋ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಜೆ ಜರುಗಿದೆ.

Advertisement

ಇಂಜಿನ್ ರಿಪೇರಿಯಿಂದಾಗಿ ಕೆಟ್ಟು ನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಿಟಿ ವಾಹನದ ಟಾಪ್ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಟಿಟಿ ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಕೂದಲಳತೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಕಳೆದ ಹಲವು ದಿನಗಳಿಂದ ಇಂಜಿನ ರಿಪೇರಿಯಿಂದ ಏರ್ಪೋಟ್ ಒಳಭಾಗದ ಆಲ್ಪಾ ಪಾರ್ಕಿಂಗ್ ಬೇ 71 ರಲ್ಲಿ ಇಂಡಿಗೋ ವಿಮಾನ ನಿಂತಿತ್ತು. ಆದರೆ ಚಾಲಕನ ಅಜಾಗರೂಕತೆಯಿಂದ ಪ್ಲೈಟ್ ನ ಮುಂಬಾಗಕ್ಕೆ‌ ಟಿಟಿ ವಾಹನ ಡಿಕ್ಕಿ ಹೊಡೆದಿದೆ.

ಟಿಟಿ ವಾಹನವು, ಏರ್ಪೋಟ್ ಒಳ ಭಾಗದಲ್ಲಿ ವಿಮಾನಗಳಿಗೆ ಸಿಬ್ಬಂದಿಯನ್ನ ಕರೆದುಕೊಂಡು ಹೋಗಿ ಬಿಡುತ್ತಿತ್ತು. ಅದರಂತೆ ಸಿಬ್ಬಂದಿಯನ್ನ ಬಿಟ್ಟು ಬರ್ತಿದ್ದ ವೇಳೆ ನಿಂತಿದ್ದ ವಿಮಾನಕ್ಕೆ ಡಿಕ್ಕಿ‌ ಹೊಡೆದಿದೆ. ನಾಗರೀಕ ವಿಮಾನಯಾನ ಇಲಾಖೆ ಅಧಿಕಾರಿಗಳು ಮತ್ತು ಏರ್ಪೋಟ್ ಸಿಬ್ಬಂದಿ ಘಟನೆ‌ ಕುರಿತು‌‌ ತನಿಖೆ ನಡೆಸಲಾಗುತ್ತಿದೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here