ಬೆಂಗಳೂರು:- ಅಟ್ರಾಸಿಟಿ ಕೇಸ್ ಗೆ ಸಂಬಂಧಿಸಿದಂತೆ ಶಾಸಕ ಯತ್ನಾಳ್ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ಹೇಳಿದೆ.
ಅಟ್ರಾಸಿಟಿ ಕಾಯ್ದೆಯಡಿ ಕೊಪ್ಪಳದಲ್ಲಿ ಎಫ್ಐಆರ್ ದಾಖಲಾಗಿದ್ದನ್ನು ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಸಮಯದಲ್ಲಿ ಯತ್ನಾಳ್ ಪರ ವಕೀಲ ವೆಂಕಟೇಶ ದಳವಾಯಿ, ಸನಾತನ ಧರ್ಮದ ಹೆಣ್ಣು ಮಕ್ಕಳಿಗೆ ಚಾಮುಂಡಿ ತಾಯಿಯನ್ನು ಪೂಜಿಸುವ ಹಕ್ಕಿದೆ. ದಲಿತ ಹೆಣ್ಣುಮಕ್ಕಳಿರಲಿ ಯಾವುದೇ ಸಮಾಜದವರಿರಲಿ ಎಲ್ಲರಿಗೂ ಹಕ್ಕಿದೆ ಎಂದು ಹೇಳಿರುವ ಹೇಳಿಕೆಯನ್ನು ತಿರುಚಿ ಕೇಸ್ ದಾಖಲು ಮಾಡಲಾಗಿದೆ ಎಂದು ವಾದಿಸಿದರು.
ವಿಡಿಯೋ ನೋಡಿದ ಬಳಿಕ ನ್ಯಾ. ಅರುಣ್ ಅವರಿದ್ದ ಏಕಸದಸ್ಯ ಪೀಠ, ಯಾವುದೇ ಪಕ್ಷದವರಿರಲಿ ಒಂದು ಸಮುದಾಯ ಓಲೈಸಿದರೆ ಹೀಗಾಗುತ್ತದೆ. ಭಾರತೀಯರನ್ನು ಭಾರತೀಯರಂತೆಯೇ ನೋಡಿದರೆ ಈ ಸಮಸ್ಯೆ ಇರುವುದಿಲ್ಲ ಎಂದು ಅಭಿಪ್ರಾಯ ಪಟ್ಟು ಯತ್ನಾಳ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದೆ.