ಬೆಂಗಳೂರು:- ಕಾರಿನ ಮೇಲೆ ಶ್ವಾನಗಳನ್ನ ಕೂರಿಸಿ ಪುಂಡಾಟ ಮೆರೆದಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ.
Advertisement
ಹರೀಶ್ ಬಂಧಿತ ಆರೋಪಿ. ಬಂಧಿತ ಆರೋಪಿ, ಯಾವುದೇ ಸೇಫ್ಟಿ ಇಲ್ಲದೆ ಕಾರಿನ ಟಾಪ್ ಮೇಲೆ ಮೂರು ನಾಯಿಗಳನ್ನು ಕೂರಿಸಿಕೊಂಡು ಅಡ್ಡಾದಿಡ್ಡಿ ಚಾಲನೆ ಮಾಡುತ್ತಿದ್ದ. ಅಲ್ಲದೆ ಇದನ್ನು ಕೇಳಲು ಹೋದವರಿಗೆ ಅವಾಚ್ಯ ಶಬ್ಧಗಳಿಂದ ಚಾಲಕ ಹರೀಶ್ ನಿಂದಿಸುತ್ತಿದ್ದ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಅಗಿತ್ತು. ಘಟನೆ ಬಗ್ಗೆ ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.