ಇಸ್ಪೀಟ್ ಅಡ್ಡೆ ಮೇಲೆ ದಾಳಿ: ಐವರು ಅರೆಸ್ಟ್, 12 ಮಂದಿ ಎಸ್ಕೇಪ್!

0
Spread the love

ಕೋಲಾರ:- ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು, ಐವರನ್ನು ಬಂಧಿಸಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯದರೂರು ಅರಣ್ಯ ಪ್ರದೇಶದಲ್ಲಿ ಜರುಗಿದೆ.

Advertisement

ಖಚಿತ ಮಾಹಿತಿ ಮೇರೆಗೆ ಕೋಲಾರ ಎಸ್ಪಿ ನಿಖಿಲ್ ಮಾರ್ಗದರ್ಶನದಲ್ಲಿ ಕೋಲಾರ ಸ್ಪೆಷಲ್ ಪೊಲೀಸ್ ಟೀಮ್ ಈ ದಾಳಿ ನಡೆಸಿದೆ. ಸೋಮಯಾಜಲಪಲ್ಲಿಯ ಮುನಿವೆಂಕಟರೆಡ್ಡಿ, ದಳಸಾನೂರು ಮುರಳಿ, ಕುರುಬೂರು ಮಂಜು, ತೆರ್ನಹಳ್ಳಿಯ ಶೇಖರ್, ವೀರತಿಮ್ಮನಹಳ್ಳಿಯ ಗಂಗುಳಪ್ಪ ಬಂಧಿತರು. ಇನ್ನುಳಿದ 12 ಮಂದಿ ಎಸ್ಕೇಪ್ ಆಗಿದ್ದಾರೆ.

ಬಂಧಿತರಿಂದ 6 ಮೊಬೈಲ್, 14 ಬೈಕ್ ಗಳು, 35 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ಶ್ರೀನಿವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here