ಚಿತ್ರದುರ್ಗ:- ಜೂಜಾಟದಲ್ಲಿ ತೊಡಗಿದ್ದ ಪ್ರತಿಷ್ಠಿತ ವ್ಯಕ್ತಿಗಳು ಸೇರಿ 28 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಚಿತ್ರದುರ್ಗದಲ್ಲಿ ಜರುಗಿದೆ.
Advertisement
ನಗರದ ಪ್ರತಿಷ್ಠಿತ ಹೊಟೇಲ್ ದುರ್ಗದ ಸಿರಿ ಹೊಟೇಲ್ ನಲ್ಲಿ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಹೊಳಲ್ಕೆರೆ ಚಿತ್ರಹಳ್ಳಿ ಪೊಲೀಸ್ ಇನ್ಸೆಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರು, ಚಿತ್ರದುರ್ಗದ ವಿವಿಧ ಕಡೆಗಳಿಂದ ಜೂಜಾಟವಾಡಲು ಹೋಟೆಲ್ ಗೆ ಆಗಮಿಸಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಜೂಜಾಟಕ್ಕೆ ಪಣವಾಗಿಟ್ಟಿದ್ದ ಸಾವಿರಾರು ರೂಪಾಯಿ ಹಾಗೂ ಇಸ್ಪೀಟ್ ಎಲೆಗಳು ವಶಕ್ಕೆ ಪಡೆದಿದ್ದಾರೆ.