ತಾಯಿ ಮೇಲೆ ಕೊಡಲಿಯಿಂದ ಹಲ್ಲೆ: ಮಾನಸಿಕ ಅಸ್ವಸ್ಥ ಮಗನಿಂದ ಕೃತ್ಯ!

0
Spread the love

ಗದಗ:- ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದ ಕುರುಬರ ಓಣಿಯಲ್ಲಿ ಮಾನಸಿಕ ಅಸ್ವಸ್ಥ ಮಗ ತನ್ನ ಹೆತ್ತ ತಾಯಿಯ ಮೇಲೆಯೇ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಅಟ್ಟಹಾಸ ಮೆರೆದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

Advertisement

ಕೂಡಲೆ ಮಾಹಿತಿ ಆಧರಿಸಿ ಸಿನಿಮೀಯ ಶೈಲಿಯಲ್ಲಿ ಆರೋಪಿ ಮಗನನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಪ್ಪ ಎಂಬಾತ ಮಾನಸಿಕ ಅಸ್ವಸ್ಥನಾಗಿದ್ದು, ತನ್ನ ತಾಯಿ ಗೌರವ್ವನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದು ಗೌರವ್ವನಿಗೆ ಗಂಭೀರ ಗಾಯಗಳಾಗಿವೆ.

ಗಾಯಾಳನ್ನು ರೋಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆರೋಪಿ ಶಿವಪ್ಪ ಈ ಹಿಂದೆ ತಂದೆ ಮೇಲೂ ಹಲ್ಲೆ ಮಾಡಿದ್ದ. ಈಗ ತಾಯಿ ಮೇಲೂ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಇತ್ತೀಚೆಗೆ ತಾವು ಸಾಕಿದ್ದ ಕುದುರೆಯನ್ನೂ ಸಹ ಕೊಡಲಿಯಿಂದ ಹೊಡೆದು ಸಾಯಿಸಿದ್ದನಂತೆ.

ತಾಯಿಯ ಮೇಲೆ ಹಲ್ಲೆ ನಡೆಸಿ ರೋಡಿಗೆ ಬಂದು ಸಾರ್ವಜನಿಕರಿಗೂ ಕೊಡಲಿ ಝಳಪಿಸಿ ಅಟ್ಟಹಾಸ ಮೆರೆದಿದ್ದಾನೆ.

ಈ ವೇಳೆ ಆತಂಕಗೊಂಡ ಸಾರ್ವಜನಿಕರು 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಮಾನಸಿಕ ಅಸ್ವಸ್ಥ ಆರೋಪಿಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಸತತ ಒಂದು ಗಂಟೆಗಳ ಕಾರ್ಯಾಚರಣೆ ಬಳಿಕ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಪಾಲಕರೊಂದಿಗೆ ಧಾರವಾಡ ನಿಮ್ಹಾನ್ಸ್ ಗೆ ಶಿವಪ್ಪನನ್ನು ರವಾನಿಸಲಾಗಿದೆ.

112ರ ಸಿಬ್ಬಂದಿಗಳಾದ ಎಸ್.ಡಿ ಗೌಡರ, ವೀರಪ್ಪ ದೊನ್ನೆಗೌಡ, ಎಚ್.ಎಸ್ ದೊಣ್ಣೆಗುಡ್ಡ ಹಾಗೂ ಮಹೇಶ್ ಚಕ್ರಸಾಲಿ ಎಂಬುವವರು ಈ ಕಾರ್ಯಾಚರಣೆ ನಡೆಸಿದರು.


Spread the love

LEAVE A REPLY

Please enter your comment!
Please enter your name here