ಲಕ್ಷ್ಮೇಶ್ವರ: ಸಮೀಪದ ಸೂರಣಗಿ ಗ್ರಾಮದಲ್ಲಿ ಶನಿವಾರ ಸಂಜೆ ಯುವಕನೋರ್ವ ಬಸ್‌ಗೆ ದಾರಿ ಬಿಡದೆ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿ ಬಸ್ ಗಾಜು ಒಡೆದಿರುವ ಘಟನೆಗೆ ಸಂಬಂಧಿಸಿದಂತೆ ಯುವಕನನ್ನು ಬಂಧಿಸಲಾಗಿದೆ.
ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಯುವಕ ಪುಟ್ಟಪ್ಪ ಪಾಟೀಲನನ್ನು ರವಿವಾರ ಬಂದಿಸಿದ್ದಾರೆ.
ಸಾರಿಗೆ ಸಂಸ್ಥೆಯ ಬಸ್ ಗುತ್ತಲದಿಂದ ಸೂರಣಗಿ ಮೂಲಕ ಲಕ್ಷೇಶ್ವರಕ್ಕೆ ಬರುತ್ತಿದ್ದಾಗ, ಸೂರಣಗಿ ಗ್ರಾಮದ ಚರ್ಚ್ ಹತ್ತಿರ ರಸ್ತೆಯ ಮೇಲೆ ನಿಂತಿದ್ದ ಸೂರಣಗಿ ಗ್ರಾಮದ ಪುಟ್ಟಪ್ಪ ಬಸನಗೌಡ ಪಾಟೀಲ ಎಂಬ ಯುವಕ, ಬಸ್ ಚಾಲಕ ಹಾರ್ನ್ ಹಾಕಿದರೂ ದಾರಿ ಬಿಟ್ಟಿಲ್ಲ.
ಆಗ ಚಾಲಕ ದಾರಿ ಬಿಟ್ಟು ಸರಿಯಲು ಹೇಳಿದ್ದಾನೆ. ಅದಕ್ಕೆ ಆರೋಪಿ ಸಿಟ್ಟಾಗಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಬಸ್ ಡ್ರೈವರ್ ಸೈಡಿನ ಬಾಗಿಲ ಕಡೆಗೆ ಹತ್ತಿ ಕೈ ಮುಷ್ಟಿ ಮಾಡಿ ಹೊಡೆದು, ಅಂಗಿ ಹಿಡಿದು ಎಳೆದಾಡಿದ್ದಾನೆ.
ಅಲ್ಲದೆ ಅಲ್ಲಿಯೇ ರಸ್ತೆಯ ಮೇಲೆ ಬಿದ್ದಿದ್ದ ಕಲ್ಲಿನಿಂದಾ ಬಸ್ಸಿನ ಗ್ಲಾಸ್ ಒಡೆದು ಇನ್ನಮ್ಯಾಲೇ ಈ ದಾರಿಗೆ ಅಡ್ಡಾಡ್ರಿ ನಿಮಗೆ ನೋಡಕೊಂತೆನಿ ಅಂತಾ ಬೆದರಿಕೆ ಹಾಕಿದ್ದಾನೆ ಎಂದು ಚಾಲಕ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪಿ ಎಸ್ ಐ ಈರಪ್ಪ ರಿತ್ತಿ ದೂರು ದಾಖಲಿಸಿಕೊಂಡಿದ್ದು, ಹಲ್ಲೆ ನಡೆಸಿ ಪರಾರಿ ಆಗಿದ್ದ ಯುವಕನನ್ನು ರವಿವಾರ ಬಂಧಿಸಿದ್ದಾರೆ.
ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಚಾಲಕ ಪುಟ್ಟಪ್ಪ ರಾಮಪ್ಪ ಗದಿಗೆಣ್ಣವರ ದೂರು ನೀಡಿದ್ದು, 0019/2024-ipc1860(U/s-353, 341, 427, 504, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.