Crime News: ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲೇ ಯುವಕರ ಮೇಲೆ ಹಲ್ಲೆ!

0
Spread the love

ಕಲಬುರ್ಗಿ:- ಪಟ್ಟಣದ ಕೋಡ್ಲಾ ಕ್ರಾಸ್ ಬಳಿ ರಸ್ತೆ ಮಧ್ಯೆ ಲಾರಿ ನಿಲ್ಲಿಸಿದ್ದನ್ನು ಪ್ರಶ್ನಿಸಿದಕ್ಕೆ ಯುವಕರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

Advertisement

ರಘು ರಡ್ಡಿ ಮತ್ತು ರಾಹುಲ್​ ರೆಡ್ಡಿ ಹಲ್ಲೆಗೊಳಗಾದವರು. ಮೆಹಬೂಬ್‌, ಸ್ನೇಹಿತರಾದ ಸೈಯದ್, ಸಲ್ಮಾನ್, ಶೇಖ್‌ ಹಲ್ಲೆ ಮಾಡಿದ ಆರೋಪಿಗಳು. ರಘು ರೆಡ್ಡಿ ಹಾಗೂ ರಾಹುಲ್‌ ರೆಡ್ಡಿ ಗ್ಯಾರೇಜ್ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮೆಹಬೂಬ್‌ ಪಟೇಲ್‌ ರಸ್ತೆ ಮಧ್ಯೆ ಲಾರಿ ನಿಲ್ಲಿಸಿದ್ದನು. ರಾಹುಲ್ ರೆಡ್ಡಿ ಬೈಕ್ ಮೇಲೆ ಹೋಗುವಾಗ ಲಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ. ಬಳಿಕ ರಾಹುಲ್​ ರೆಡ್ಡಿ ಲಾರಿಯನ್ನು ರಸ್ತೆ ಮಧ್ಯದಲ್ಲಿ ಏಕೆ ನಿಲ್ಲಿಸಿರುವೆ ಎಂದು ಮೇಹಬೂಬ್​ ಪಟೇಲ್​ನನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಮೇಹಬೂಬ್ ಪಟೇಲ್ “ನಾನು ಲಾರಿ ಎಲ್ಲಿ ಬೇಕಾದರೂ ನಿಲ್ಲಿಸುತ್ತೇನೆ ನಿನ್ಯಾವನೋ ಕೇಳವನು” ಅಂತ ಅವಾಜ್ ಹಾಗಿದ್ದಾನೆ. ಬಳಿಕ ರಾಹುಲ್​ ಅವರಿಗೆ ಮೇಹಬೂಬ್ ಪಟೇಲ್ ಅವಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಇಬ್ಬರ ಮಧ್ಯೆ ಗಲಾಟೆ ವಿಚಾರ ತಿಳಿದು ರಾಹುಲ್ ಸಹೋದರ ರಘು ಸ್ಥಳಕ್ಕೆ ಬಂದಿದ್ದಾನೆ. ನಂತರ ಮೇಹಬೂಬ್ ಪಟೇಲ್ ಸ್ನೇಹಿತರಾದ ಸೈಯದ್ ಸುಲ್ತಾನ್, ಸಲ್ಮಾನ್ ಪಟೇಲ್, ಮೇಹಬೂಬ್ ಪಟೇಲ್, ಶೇಖ್ ಸಮೀರ್ ಸ್ಥಳಕ್ಕೆ ಬಂದು ಸಾರ್ವಜನಿಕವಾಗಿ ಏಕಾ ಎಕಿ ಸಹೋದರ ಮೇಲೆ ಹಲ್ಲೆ ಮಾಡಿದ್ದಾರೆ. ಯುವಕರ ಮೇಲೆ ಹಲ್ಲೆ ಮಾಡಿದ ವಿಡಿಯೋ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಾಯಾಳು ರಘು ರೆಡ್ಡಿಯನ್ನು ಕಲಬುರಗಿಯಲ್ಲಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಸೇಡಂ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here