ಕೊಡಗಿನಲ್ಲಿ ಪ್ರವಾಸಿಗರ ಮೇಲೆ ಹಲ್ಲೆ: ಬಿಜೆಪಿ ಮುಖಂಡನ ಅಬ್ಬರಕ್ಕೆ ಬೆದರಿದ ಕುಟುಂಬ

0
Spread the love

ಕೊಡಗು: ಇನ್ನೇನು ಚಳಿಗಾಲ ಕೂಡ ಆರಂಭವಾಯಿತು, ಪ್ರಕೃತಿ ಸೊಬಗನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಅದರಂತೆ ಕೊಡಗಿನ ಪ್ರಕೃತಿ ಸೌಂದರ್ಯ ಸವಿಯಲು ಹೋಗಿದ್ದ ಕುಟುಂಬವೊಂದರ ಮೇಲೆ ಪ್ರಭಾವಿ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ಕೆ.ಜಿ.ಬೋಪಯ್ಯನವರ ಪರಮಾಪ್ತ ಮನು ಮುತ್ತಪ್ಪ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

Advertisement

ಕೊಡಗು ಬಿಜೆಪಿ ಮುಖಂಡ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಒಡೆತನದ Sky larc ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ವಿನಲ್ ಜೈನ್, ಇತರ ಮೂವರು ದಂಪತಿಗಳು ಮತ್ತು ಐವರು ಮಕ್ಕಳ ಮೇಲೆ ಹಲ್ಲೆ ಮಾಡಿದ್ದು, ವಿಡಿಯೋ ಚಿತ್ರಣ ಸಮೇತ ಕುಟುಂಬದ ಮೇಲೆ ದೈಹಿಕ ಹಲ್ಲೆ, ಕೊಲೆ ಬೆದರಿಕೆ ಮತ್ತು ಮಕ್ಕಳನ್ನು ಅಪಾಯಕ್ಕೆ ಒಳಪಡಿಸಿದ ಸೆಕ್ಷನ್ ನಡಿಯಲ್ಲಿ ದೂರು ನೀಡಿದ್ದಾರೆ.

ಮನು ಮುತ್ತಪ್ಪ ಕೊಡಗಿನ ಪ್ರಭಾವಿ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ಕೆ.ಜಿ.ಬೋಪಯ್ಯನವರ ಪರಮಾಪ್ತನಾಗಿದ್ದು, ಕೊಡಗಿನ ಜನತೆ ಘಟನೆಯನ್ನು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಯಮಗಳನ್ನು ಮೀರಿ ರೆಸಾರ್ಟ್ ನಿರ್ಮಿಸಲಾಗಿದೆ ಎಂದು ಹಲವರ ಆರೋಪವಾಗಿದೆ. ಸದ್ಯ ಘಟನೆ ಸಂಬಂಧ ಮನುಮುತ್ತಪ್ಪ ವಿರುದ್ದ FIR ಮತ್ತು ಬಂಧನದ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.


Spread the love

LEAVE A REPLY

Please enter your comment!
Please enter your name here