ಕಾಂಗ್ರೆಸ್ ನಾಯಕರನ್ನು ಕುಗ್ಗಿಸಲು ದಾಳಿ: ED ರೇಡ್ ಬಗ್ಗೆ ಬಸವರಾಜ ರಾಯರೆಡ್ಡಿ ಹೇಳಿದ್ದೇನು..?

0
Spread the love

ನವದೆಹಲಿ: ಬಳ್ಳಾರಿಯ ಮೂವರು ಶಾಸಕರು, ಓರ್ವ ಸಂಸದನಿಗೆ ಇ.ಡಿ ಬೆಳ್ಳಂಬೆಳಗ್ಗೆ ಶಾಕ್​ ನೀಡಿದೆ. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ, ಸಂಡೂರಲ್ಲಿರುವ ಸಂಸದ ಇ.ತುಕಾರಾಂ ಮನೆ ಮೇಲೆ ಇ.ಡಿ ರೇಡ್​ ಮಾಡಿದೆ.. ಇನ್ನೂ ಈ ವಿಚಾರವಾಗಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೇ ನೀಡಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,

Advertisement

ಐಟಿ ಹಾಗೂ ಇಡಿ ಇತ್ತಿಚಿನ ವರ್ಷಗಳಲ್ಲಿ ಮೋದಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸೇಡಿನ ರಾಜಕರಣ ಮಾಡುತ್ತಿದೆ. ಬರೀ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ಮಾಡೋದು ಸರಿಯಲ್ಲ. ಇದು ಪೂರ್ವ ನಿಯೋಜಿತ, ಇದು ಸರಿಯಿಲ್ಲ. ಕಾಂಗ್ರೆಸ್ ನಾಯಕರನ್ನು ಕುಗ್ಗಿಸಲು ದಾಳಿ ಮಾಡಲಾಗುತ್ತಿದೆ. ವಾಲ್ಮೀಕಿ ಹಗರಣ ಆಗಿಲ್ಲ ಎಂದು ಹೇಳುತ್ತಿಲ್ಲ. ತನಿಖೆ ನಡೆಯುತ್ತಿದೆ, ತನಿಖೆಯಿಂದ ಸತ್ಯ ಹೊರ ಬರಲಿದೆ. ತನಿಖೆ ಆಗಲಿ ಎಂದರು.

ಜಾತಿ ಗಣತಿ ಸರ್ವೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಸಿಎಂ ಸಿದ್ದರಾಮಯ್ಯಗೆ ಹಿನ್ನಡೆ ಅಲ್ಲ. ವರದಿ ಪ್ರಕಟಿಸಿ ಎಂದು ನಾನೇ ಮೊದಲು ಹೇಳಿದ್ದು. ಸತ್ಯ ಹೊರಬರಲಿ ಎಂದು ಸಿಎಂಗೆ ನಾನು ಮೊದಲೇ ಹೇಳಿದ್ದೆ. ಸಮೀಕ್ಷೆ ತಿದ್ದುಪಡಿ ಮಾಡಿ ಅಂತಾ ಹೇಳಿದ್ದೆ. ಹತ್ತು ವರ್ಷಗಳ ಹಿಂದೆ ಮಾಡಿದ್ದ ಸರ್ವೆ ಸರಿಯಿಲ್ಲ ಎಂದು ಹಲವರು ಹೇಳಿದ್ದರು.

ಸದ್ಯ ಹೈಕಮಾಂಡ್ ಕೂಡ ಮರುಸರ್ವೆ ಮಾಡಲು ಹೇಳಿದೆ. ಪ್ರಬಲ ಸಮುದಾಯದ ಒತ್ತಾಯ ಅಂತಾ ಅಲ್ಲ, ಜಾತಿ ಸಮೀಕ್ಷೆ ಮಾಡುವಾಗ ಬರೆಸುವಾಗ ಸರಿಯಾಗಿ ಬರೆಸಿದ್ದರೆ ಹಾಗೆ ಆಗುತ್ತಿರಲಿಲ್ಲ. ಸರಿಯಾಗಿ ಬರೆಸಿ ಎಂದು ಆಯಾ ಮುಖಂಡರು ಹೇಳಿದ್ದಾರೆ. ಹೀಗಾಗಿ ಆಯಾ ಮುಖಂಡರು ಸರಿಯಾಗಿ ಹೇಳಿ ಬರೆಸಲಿ. ಈ ಬಾರಿ ಸರಿಯಾಗಿ ಬರೆಸಿದರೆ ಯಾವುದೇ ತೊಂದರೆ ಆಗಲ್ಲ. ಆಧಾರ್ ಪಡೆದು ಅದರ ಮೇಲೆ ಸಹಿ ಹಾಕಿ ಈ ಬಾರಿ ಜಾತಿ ಸಮೀಕ್ಷೆ ನಡೆಸಲು ಸಲಹೆ ನೀಡಲಾಗಿದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here