ವಿಜಯಸಾಕ್ಷಿ ಸುದ್ದಿ, ಗದಗ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಮಾಯಕರ ಮೇಲೆ ನಡೆದ ಗುಂಡಿನ ದಾಳಿ ಸಮಸ್ತ ಮಾನವ ಕುಲದ ಮೇಲೆ ಮಾಡಿದ ದಾಳಿಯಾಗಿದೆ ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದ ರಾಜ್ಯಾಧ್ಯಕ್ಷ ಮಹ್ಮದಶಫಿ ಎಸ್.ನಾಗರಕಟ್ಟಿ ಖಂಡಿಸಿದ್ದಾರೆ.
ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಕೇಂದ್ರ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಉಗ್ರರು ಇಂತಹ ದಾಳಿಯಿಂದ ಭಾರತವನ್ನು ಮಣಿಸಬಹುದೆಂದು ಭಾವಿಸಿದ್ದರೆ ಅದು ಅವರ ಮೂರ್ಖತನ. ದೇಶದ ಐಕ್ಯತೆಗೆ ಸಂಬಂಧಿಸಿದ ವಿಷಯ ಬಂದಾಗ ಭಾರತೀಯರು ಯಾವುದೇ ಧರ್ಮವನ್ನು ನೋಡುವುದಿಲ್ಲ. ಅಮಾಯಕರ ಮೇಲೆ ಹಲ್ಲೆ ಮಾಡುವುದನ್ನು ಯಾವ ಧರ್ಮವೂ ಒಪ್ಪಿಕೊಳ್ಳುವುದಿಲ್ಲ.
ಇಂತಹ ಕೃತ್ಯವನ್ನು ಧರ್ಮದ ಹೆಸರಿನಲ್ಲಿ ಮಾಡುವುದನ್ನು ಮುಸ್ಲಿಂ ಸಮಾಜವು ಎಂದೂ ಒಪ್ಪಿಕೊಳ್ಳುವುದಿಲ್ಲ. ಭಾರತ ಸರಕಾರವು ತಕ್ಷಣ ಇವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಧ್ಯಕ್ಷರಾದ ಎಂ.ಡಿ. ಜಾಫರ್ ಡಾಲಾಯತ, ಬಿಜಾಪುರ ಜಿಲ್ಲಾ ಅಧ್ಯಕ್ಷ ತಯೈಬ ಅಥಣಿ, ಮುನ್ನ ಕಲ್ಮನಿ, ಎಂ.ಐ. ಮುಲ್ಲಾ, ರಫೀಕ್ ಮುಲ್ಲಾನವರ, ಎಂ.ಎಂ. ಶಿರಹಟ್ಟಿ, ಜಿಲ್ಲಾ ಯುವ ಘಟಕದ ಯಾಸಿನ್ ಎ.ಮುಲ್ಲಾ, ಅಫ್ಜಲ್ ಮನಿಯಾರ, ಯಾಸಿನ್ ಮುಲ್ಲಾದರವೇಶ್, ಮೊಹಮ್ಮದ ಯೂಸುಫ್, ಯಾಸಿನ್ ಖವಾಸ್ ಮುಂತಾದವರಿದ್ದರು.