ಮಡಿಕೇರಿ:- ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸಿದ 10 ಮಂದಿ ಆರೋಪಿಗಳನ್ನು ವಿರಾಜಪೇಟೆ ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮದಲ್ಲಿ ಜರುಗಿದೆ. ಇದು ಸುಮಾರು 10 ಕೋಟಿ ರೂ. ಮೌಲ್ಯದ್ದಾಗಿದೆ.
Advertisement
  
ಶಂಶುದ್ದೀನ್ (45), ಎಂ.ನವಾಜ್ (54 ವರ್ಷ), ವಿ.ಕೆ ಲತೀಶ್ (53), ಜೇಶ್.ವಿ (40), ಪ್ರಶಾಂತ್.ಟಿ (52), ಎ.ವಿ ಶಂಶುದ್ದೀನ್ (48), ಬಾಲಚಂದ್ರನಾಯಕ್ (55), ಕೆ.ಕೆ ಜೋಬಿಸ್ (33), ವರ್ಷ, ಬಂಧಿತ ಆರೋಪಿಗಳು.
ಕೇರಳದ ತಿರುನಂತಪುರಂನಿಂದ ತಂದು ಆಂಧ್ರಪ್ರದೇಶ ಅಥವಾ ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 10 ಕೋಟಿ ರೂ. ಮೌಲ್ಯದ 10 ಕೆ.ಜಿ 390 ಗ್ರಾಂ ತೂಕದ ತಿಮಿಂಗಿಲ ವಾಂತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಸಂಬಂಧ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


