ನಟ ಪ್ರಥಮ್‌ ಮೇಲೆ ಹಲ್ಲೆಗೆ ಯತ್ನ: ಆರೋಪಿ ರೌಡಿಶೀಟರ್‌ ಬಂಧನ

0
Spread the love

ಬಿಗ್‌ ಬಾಸ್‌ ಮಾಜಿ ಸ್ಪರ್ಧಿ, ನಟ ಪ್ರಥಮ್‌ಗೆ ಡ್ರ್ಯಾಗರ್‌ ತೋರಿಸಿ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದ್ದ ರೌಡಿಶೀಟರ್‌ ಬೇಕರಿ ರಘು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕಳೆದ ಕೆಲ ದಿನಗಳ ಹಿಂದೆ ರಘು ನಟ ಪ್ರಥಮ್‌ ಗೆ ಟ್ರ್ಯಾಗರ್‌ ತೋರಿಸಿ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದ್ದ. ಈ ಬಗ್ಗೆ ಪ್ರಥಮ್‌ ದೂರು ದಾಖಲಿಸಿದ್ದರು. ಪ್ರಥಮ್‌ ನೀಡಿದ ದೂರಿನ ಮೇರೆಗೆ ಇದೀಗ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲಿಸರು ಬೇಕರು ರಘು ಎಂಬಾತನ್ನು ಅರೆಸ್ಟ್‌ ಮಾಡಿದ್ದಾರೆ.

ಕಳೆದ ತಿಂಗಳು ದೊಡ್ಡಬಳ್ಳಾಪುರ ಸಿವಿಲ್ ಕೋರ್ಟ್‌ಗೆ ಹಾಜರಾಗಿದ್ದ ಬೇಕರಿ ರಘು ಜಾಮೀನು ಪಡೆದಿದ್ದ. ಬಂಧನಕ್ಕೂ ಮುನ್ನವೇ ಜಾಮೀನು ಪಡೆದುಕೊಂಡಿದ್ದ. ಸದ್ಯ ಪ್ರಕರಣ ಸಂಬಂಧ ರಘುನನ್ನು ಪೊಲೀಸರು ಬಂಧಿಸಿದ್ದಾರೆ.

ನ್ಯಾಯಾಲಯ ವಿಧಿಸಿದ ಷರತ್ತುಗಳ ಉಲ್ಲಂಘನೆ ಮಾಡಿದ ಕಾರಣ ನೀಡಿ ಬಂಧಿಸಲಾಗಿದೆ. ದೊಡ್ಡಬಳ್ಳಾಪುರ ಸಿವಿಲ್ ಕೋರ್ಟ್‌ನಿಂದ ಕಳೆದ ತಿಂಗಳು ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಪ್ರತಿ ಭಾನುವಾರ ಠಾಣೆಗೆ ಬಂದು ಸಹಿ ಹಾಕಲು ಸೂಚನೆ ನೀಡಲಾಗಿತ್ತು.ಆದರೆ ನ್ಯಾಯಾಲಯ ನೀಡಿದ್ದ ಶರತ್ತನ್ನು ರಘು ಉಲ್ಲಂಘನೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ರಘು ಹಾಗೂ ಪ್ರಕರಣದ ಮತ್ತೋರ್ವ ಆರೋಪಿ ಯಶಸ್ವಿನಿಯನ್ನು ಪೊಲೀಸರು ಬಂಧಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here