ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ನಾಳೆಯಿಂದ ಮೂರು ದಿನ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಡಿಸೆಂಬರ್ 20ರ ವರೆಗೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಪವರ್ ಕಟ್ ಆಗುವ ಏರಿಯಾಗಳ ಪಟ್ಟಿ ಇಲ್ಲಿದೆ:
ಟ್ರಾನ್ಸ್‌ಫಾರ್ಮರ್‌ಗಳು ಮತ್ತು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುವ ಹಿನ್ನೆಲೆ ಡಿಸೆಂಬರ್ 20ರ ವರೆಗೆ ಪ್ರಭಾಕರ್ ಲೇಔಟ್, ಗುಂಡಪ್ಪ ಲೇಔಟ್, ಅಂಜನಿ ಲೇಔಟ್, ಆಶ್ರಯ ಲೇಔಟ್, ಕೆಂಪಮ್ಮ ಲೇಔಟ್, ವೆಂಕಟಗಿರಿಕೋಟೆ, ರಾಯಲ್ ಸರ್ಕಲ್, ಬಾಗೇಪಲ್ಲಿ ಸರ್ಕಲ್, ಟ್ಯಾಂಕ್ ಬ್ಲಂಡ್ ರಸ್ತೆ, ಟೀಚರ್ಸ್ ಕಾಲೋನಿ ಮತ್ತು ತಿಮ್ಮಸಂದ್ರ ಸೇರಿದಂತೆ ಪ್ರದೇಶಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ.
ಅದರಂತೆ ಯಲಹಂಕ ಎಂಯುಎಸ್‌ಎಸ್, ಕೆಎಂಎಫ್, ಮದರ್ ಡೈರಿ, ಉನ್ನಿಕೃಷ್ಣನ್ ರಸ್ತೆ, ಬಿ ಸೆಕ್ಟರ್, ಎನ್‌ಇಎಸ್ ರಸ್ತೆ, ಸಿಎಂ ಎನ್‌ಕ್ಲೇವ್, ಮಾತೃ ಲೇಔಟ್, ಸೋಮೇಶ್ವರನಗರ, ಕನಕನಗರ, ಜುಡಿಸಿಯಲ್ ಲೇಔಟ್, ಯಲಹಂಕ ಓಲ್ಡ್ ಟೌನ್, ಗಾಂಧಿ ನಗರ, ಬಿಬಿಎಂಪಿ ರಸ್ತೆ (ಓಲ್ಡ್ ಟೌನ್ ಮತ್ತು ಕೋಡಿ ರಸ್ತೆ), ಕಾರೆ, ಆರ್‌ಎಂಝೆಡ್ ಮಾಲ್, ಆರ್‌ಎಂಝೆಡ್ ರೆಸಿಡೆನ್ಸಿಯಲ್, ಪುರವಂಕರ ಅಪಾರ್ಟ್‌ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.



