ನಾಗರೀಕರ ಗಮನಕ್ಕೆ; ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ಇಂದಿನಿಂದ ಸೆ 30ರವರೆಗೆ ವಿದ್ಯುತ್ ವ್ಯತ್ಯಯ!

0
Spread the love

ಬೆಂಗಳೂರು:- ಬೆಂಗಳೂರು ಸೇರಿ ಬೆಸ್ಕಾಂ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಇಂದಿನಿಂದ ಸೆ 30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Advertisement

ಆನೇಕಲ್ ಟೌನ್, ಕಾವಲುಹೊಸಹಳ್ಳಿ, ಗೌರೇನಹಳ್ಳಿ, ಹಲ್ದೇನಹಳ್ಳಿ, ಹೊಂಪಲಗಟ್ಟಾ, ಚೌಡೇನಹಳ್ಳಿ, ಹೊನ್ನ ಕಳಸಾಪುರ, ಕರ್ಪೂರು, ಬ್ಯಾಗಡದೇನಹಳ್ಳಿ, ಕಾಡ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ. ಸಮಂದೂರು, ರಾಚಮನಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೆ ಪುರ, ಪಿ.ಗೊಲ್ಲಹಳ್ಳಿ, ತೆಲಗರಹಳ್ಳಿ, ವನಕನಹಳ್ಳಿ. ಇನ್ನು ಬೆಸ್ಕಾಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ಅಟಲ್‌ಭೂಜಲ್ ಯೋಜನೆಯಡಿ ಪ್ರತ್ಯೇಕ ಕೃಷಿ ಫೀಡರ್ ನಿರ್ಮಾಣ ಕಾಮಗಾರಿ ಕೈಗೊಂಡ ಹಿನ್ನಲೆ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ತುಮಕೂರು ಬೆಸ್ಕಾಂ ವ್ಯಾಪ್ತಿಯಲ್ಲಿ ಅಟಲ್​ ಭೂಜಲ್​​ ಯೋಜನೆಯಡಿ ಪ್ರತ್ಯೇಕ ಕೃಷಿ ಫೀಡರ್​​​ ನಿರ್ಮಾಣ ಕಾಮಗಾರಿ ಹಿನ್ನಲೆ ಸೆ. 20, 22, 24, 26, 28 ಮತ್ತು 30 ರಂದು ಹನುಮಂತಪುರ, ಜಗನ್ನಾಥಪುರ, ಅಣ್ಣೆತೋಟ, ಅಗ್ನಿಬನಿರಾಯ ನಗರ, ನಿರ್ವಾಣಿ ಲೇಔಟ್, ಅಂಬೇಡ್ಕರ್‌ ನಗರ. ಬಿ.ಎ. ಗುಡಿಪಾಳ್ಯ. ಬಿ.ಹೆಚ್‌.ಪಾಳ್ಯ, ದಿಬ್ಬೂರು, ಗುಬ್ಬಿ ಗೇಟ್, ಹೊಸಹಳ್ಳಿ, ಹಾರೋನಹಳ್ಳಿ, ರಿಂಗ್ ರಸ್ತೆ, ಹೆಬ್ಬಾಕ, ಹೊನ್ನೇನಹಳ್ಳಿ, ಡಿ.ಎಂ.ಪಾಳ್ಯ, ಕಪ್ಪೂರು, ನರಸಾಪುರ, ಪಿಎನ್​ಆರ್​​ ಪಾಳ್ಯ, ಭಜಂತ್ರಿ ಪಾಳ್ಯ, ಕೆಜಿ ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ಕಡಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here