ಬೆಂಗಳೂರು: ಬ್ಯಾಂಕ್ ಗ್ರಾಹಕರು ನೋಡಲೇಬೇಕಾದ ಸ್ಟೋರಿ. ನಾಳೆ ದೇಶಾದ್ಯಂತ ಬ್ಯಾಂಕ್ಗಳಲ್ಲಿ ಸೇವೆ ವ್ಯತ್ಯಯವಾಗುವ ಸಾಧ್ಯತೆ ಇದೆ.
ಬ್ಯಾಂಕ್ ಸಿಬ್ಬಂದಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮುಷ್ಕರಕ್ಕೆ ಕರೆ ನೀಡಿದ್ದು, ವಾರಕ್ಕೆ 6 ದಿನದ ಬದಲಿಗೆ 5 ದಿನಗಳ ಕೆಲಸದ ಅವಧಿಯನ್ನು ಖಾಯಂಗೊಳಿಸಲು ಒತ್ತಾಯಿಸಿದ್ದಾರೆ. ಕಳೆದ ಮೂರು ದಿನಗಳಿಂದ ಸರಣಿ ರಜೆಗಳ ಕಾರಣದಿಂದ ಹೀಗಾಗಲೇ ಬ್ಯಾಂಕ್ಗಳು ಕಾರ್ಯನಿರ್ವಹಿಸುತ್ತಿಲ್ಲ, ಮತ್ತು ನಾಳೆ ಮುಷ್ಕರದಿಂದ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ವ್ಯವಹಾರಗಳು ಸ್ಥಗಿತಗೊಳ್ಳುತ್ತವೆ.
ಹೀಗಾಗಿ, ಹಣ ವಿತ್ಡ್ರಾ, ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್ ಸಿದ್ಧಪಡಿಸುವುದು, ಹೊಸ ಖಾತೆ ತೆರೆಯುವುದು ಅಥವಾ KYC ಅಪ್ಡೇಟ್ ಮೊದಲಾದ ಸೇವೆಗಳಲ್ಲಿ ವ್ಯತ್ಯಯ ಸಂಭವಿಸುತ್ತದೆ. ಆದರೆ ಡಿಜಿಟಲ್ ಬ್ಯಾಂಕಿಂಗ್, ಮೊಬೈಲ್/ಇಂಟರ್ನೆಟ್ ಬ್ಯಾಂಕಿಂಗ್, UPI ಪಾವತಿಗಳು ಮತ್ತು ಎಟಿಎಂ ಸೇವೆಗಳು ಲಭ್ಯವಾಗುತ್ತವೆ.
ಆದರೂ, ಎಟಿಎಂನಲ್ಲಿ ಹಣದ ಕೊರತೆ ಉಂಟಾಗುವ ಸಾಧ್ಯತೆ ಇದೆ. ಗ್ರಾಹಕರು ಶಾಖೆಗಳಿಗೆ ಭೇಟಿ ನೀಡುವುದಕ್ಕಿಂತ ಮೊದಲು ಈ ಮಾಹಿತಿಯನ್ನು ಗಮನಿಸಿ ತುರ್ತು ಹಣಕಾಸಿನ ವರ್ಗಾವಣೆಗಳಿಗಾಗಿ ಡಿಜಿಟಲ್ ಮಾಧ್ಯಮಗಳನ್ನು ಬಳಸುವುದೇ ಸೂಕ್ತ.



