ಮಧುಮೇಹ ಕಾಯಿಲೆ ಎಷ್ಟು ಅಪಾಯಕಾರಿ ಎಂದರೆ, ಮನುಷ್ಯನಿಗೆ ಒಮ್ಮೆ ಬಂದರೆ ಮತ್ತೆ ಹೋಗುವ ಮಾತೇ ಇಲ್ಲ. ಕೇವಲ ಈ ಕಾಯಿಲೆ ನಿಯಂತ್ರಣ ತಪ್ಪಿ ಹೋಗದಂತೆ ಕಂಟ್ರೋಲ್ ಮಾಡಿಕೊಳ್ಳಬಹುದು ಅಷ್ಟೇ.
ಬದಲಾಗುತ್ತಿರುವ ಜೀವನಶೈಲಿಗೆ ತಕ್ಕಂತೆ, ನಾವು ಕೂಡ ಬದಲಾಗುತ್ತಿದ್ದೇವೆ. ಈ ರೀತಿ ಬದಲಾವಣೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಪೂರ್ವಾಜರು ಮುಂಚೆ ಸಂಪ್ರದಾಯಿಕ ಶೈಲಿಯಲ್ಲಿ ಅನ್ನವನ್ನು ಬೇಯಿಸುತ್ತಿದ್ದರು.
ಇದರಿಂದ ಅವರ ಆರೋಗ್ಯ ಚೆನ್ನಾಗಿರುತ್ತಿತ್ತು, ಆದರೆ ಇದೀಗ ಆಧುಕ ಜೀವನಶೈಲಿಯಿಂದ ನಮ್ಮ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದೆ.
ಮೈಕ್ರೊವೇವ್ ಓವನ್‌ನಂತಹ ಅನೇಕ ಆಧುನಿಕ ಅಡಿಗೆ ವಸ್ತುಗಳು ನಮ್ಮ ಜೀವನವನ್ನು ಸುಲಭಗೊಳಿಸಿವೆ. ಆದರೆ ಇಂದಿನ ಜೀವನಶೈಲಿಯ ಕಾರಣ ನಾವು ನಮ್ಮ ಸಾಂಪ್ರದಾಯಿಕ ಅಡುಗೆ ವಿಧಾನಗಳನ್ನು ನಿಧಾನವಾಗಿ ಮರೆತುಬಿಟ್ಟಿದ್ದೇವೆ.
ಅಕ್ಕಿಯನ್ನು ನೆನೆಸುವುದರಿಂದ, ಪೋಷಕಾಂಶಗಳು ನೀರಿನಲ್ಲಿ ಉತ್ತಮವಾಗಿ ಹೀರಲ್ಪಡುತ್ತವೆ. ಇದಲ್ಲದೆ, ಅದರ ಗ್ಲೈಸೆಮಿಕ್ ಇಂಡೆಕ್ಸ್ ಮಟ್ಟವು ಕಡಿಮೆಯಾಗುತ್ತದೆ. ಅಕ್ಕಿಯನ್ನು ಬೇಯಿಸುವ ಮೊದಲು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿಡುವುದರಿಂದ ಇದರಲ್ಲಿರುವ ಗ್ಲೈಸೆಮಿಕ್ ಇಂಡೆಕ್ಸ್ ಅಂಶಗಳು ಕಡಿಮೆಯಾಗುತ್ತದೆ.
ಈ ಪ್ರಕ್ರಿಯೆಯ ಮೂಲಕ ಅಕ್ಕಿಯಲ್ಲಿರುವ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಸರಳ ಸಕ್ಕರೆ ಅಂಶಗಳಾಗಿ ವಿಭಜಿಸಲಾಗುತ್ತದೆ. ಈ ಕಾರಣದಿಂದಾಗಿ, ನಮ್ಮ ದೇಹವು ಈ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.
ಇದು ಅಕ್ಕಿಯ ಜಿಐ ಮಟ್ಟವನ್ನು ಕಡಿಮೆ ಮಾಡುತ್ತದೆ. ಆಹಾರವು ಕಡಿಮೆ ಜಿಐ ಮಟ್ಟವನ್ನು ಹೊಂದಿದ್ದರೆ, ಅದನ್ನು ಸೇವಿಸುವ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಕೂಡ ನಿಯಂತ್ರಣದಲ್ಲಿರುತ್ತದೆ. ಈ ರೀತಿ ಅಕ್ಕಿಯನ್ನು ಬೇಯಿಸಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಶುಗರ್ ಹೆಚ್ಚಾಗದಂತೆ ಕಾಪಾಡಬಹುದು.
ಅಕ್ಕಿಯನ್ನು ಬೇಯಿಸುವ ಮೊದಲು ಅಕ್ಕಿಯನ್ನು ನೀರಿನೊಂದಿಗೆ ಚೆನ್ನಾಗಿ ತೊಲೆದುಕೊಳ್ಳಿ. ನಂತರ ಸ್ವಲ್ಪ ಸಮಯದ ವರೆಗೂ ಈ ತೊಳೆದ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿಟ್ಟ ಈ ಅಕ್ಕಿಯನ್ನು ಒಂದು ಪಾತ್ರಗೆ ಹಾಕಿ ಬೇಯಿಸಿ ಅನ್ನ ತಯಾರಿಸಿ ಸೇವಿಸಿ.
ನೀರಿನಲ್ಲಿ ನೆನೆಸಿದ ಅಕ್ಕಿಯನ್ನು ಬೇಯಿಸಿ ಸೇವಿಸುವುದರಿಂದ, ಮಧುಮೇಹ ಹೆಚ್ಚಾಗುವುದನ್ನು ತಡೆಯಬಹುದು. ಆದರೆ, ಕೇವಲ ಸ್ವಲ್ಪ ಸಮಯದ ವರೆಗೂ ಮಾತ್ರ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಬೇಕು, ಕೆಲವೊಬ್ಬರು ಅಕ್ಕಿಯನ್ನು ನೀರಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ನೆನೆಸಿ ಇಡುತ್ತಾರೆ.
ಇದರಿಂದ ವಿಟಮಿನ್ ಮತ್ತು ಮಿನರಲ್ಸ್ ನೀರಿನಲ್ಲಿಯೇ ನಾಶವಾಗಿ ಹೋಗುತ್ತದೆ. ಅಕ್ಕಿಯನ್ನು ಯಾವಾಗಲೂ ಕೇವಲ 15-20 ನಿಮಿಷ ಮಾತ್ರ ನೆನೆಸಿ ಇಡಬೇಕು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಹೀಗೆ ಮಾಡಿದ್ರೆ ಶುಗರ್ ಕಂಟ್ರೋಲ್ ನಲ್ಲಿಡಬಹುದು ಎನ್ನಲಾಗಿದೆ.