HomeGadag Newsಗಮನ ಸೆಳೆದ ಪಥ ಸಂಚಲನ

ಗಮನ ಸೆಳೆದ ಪಥ ಸಂಚಲನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗುರುತಿಸಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಸೇರಿದಂತೆ ಇತರೆ ಗಣ್ಯರು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡರು.

ನಾಗರಿಕ ಪೊಲೀಸ್ ಪಡೆಯ ನೇತೃತ್ವವನ್ನು ಚಾಂದಭಾಷಾ, ಪ್ರೊ. ಆರ್.ಎಸ್.ಐ ಡಿಎಆರ್ ಗದಗ, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ.ಎನ್. ವಸ್ತ್ರದ, ಅಗ್ನಿಶಾಮಕ ಪಡೆಯ ನೇತೃತ್ವವನ್ನು ಬಂಗಾರಪ್ಪ ವೈ.ಟಿ, ಅಬಕಾರಿ ದಳದ ನೇತೃತ್ವವನ್ನು ವಿಜಯಲಕ್ಷ್ಮೀ ಗಣತಿ, ಅರಣ್ಯ ರಕ್ಷಕ ಪಡೆಯ ನೇತೃತ್ವವನ್ನು ಡೆಪ್ಯೂಟಿ ಆರ್.ಎಫ್.ಓ ಸಚಿನ ಬಿಸನಳ್ಳಿ, ಎನ್.ಸಿ.ಸಿ. ಸಿನೀಯರ್ ಬಾಯ್ಸ್ ದಳದ ನೇತೃತ್ವವನ್ನು 38 ಕೆಎಆರ್ ಬಟಾಲಿಯನ್‌ನ ಜ್ಞಾನೇಶ ಗಾಯಕವಾಡ, ಎನ್.ಸಿ.ಸಿ. ಸೀನಿಯರ್ಸ್ ಗರ್ಲ್ಸ್ ನೇತೃತ್ವವನ್ನು 38 ಕೆಎಆರ್ ಬಟಾಲಿಯನ್ ಗದಗನ ಕವಿತಾ ಬಾಕಳೆ, ಸೇವಾದಳದ ನೆತೃತ್ವವನ್ನು ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ, ಎಸ್.ಎಂ. ಕೃಷ್ಣಾ ನಗರದ ಆಯುಶಾ ಸರ್ಕವಾಸ, ಕ್ರೀಡಾ ತಂಡದ ನೇತೃತ್ವವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕುಮಾರ ಸಂದೀಪ ನವಲೆಕರ, ಸ್ಕೌಟ್ಸ್ನ ನೇತೃತ್ವವನ್ನು ಸಿ.ಡಿ.ಓ ಜೈನ್ ಪ್ರಾಥಮಿಕ ಶಾಲೆಯ ಅಭಿಷೆಕ ತೊಂಡಿಹಾಳ, ಸಾಮಾನ್ಯ ವಿಭಾಗದ ನೇತೃತ್ವವನ್ನು ಸೈಂಟ್ ಜಾನ್ ಪ್ರೌಢಶಾಲೆಯ ಸೋಮಶೇಖರ್, ಸ್ಕೌಟ್ಸ್ ವಿಭಾಗದ ನೇತೃತ್ವವನ್ನು ಕೆ.ಎಲ್.ಇ ಸಿಬಿಎಸ್‌ಇ ಬಾಲಕರ ಶಾಲೆಯ ಸಾಯಿಸಮರ್ಥ ಬಡಿಗೇರ, ಗೈಡ್ಸ್ ವಿಭಾಗದ ನೇತೃತ್ವವನ್ನು ಕೆ.ಎಲ್.ಇ ಸಿಬಿಎಸ್‌ಇ ಬಾಲಕಿಯರ ಶಾಲೆಯ ಸಾನ್ವಿ ಚನ್ನಪ್ಪಗೌಡ್ರ, ಸಾಮಾನ್ಯ ವಿಭಾಗದ ನೇತೃತ್ವವನ್ನು ಕೆ.ವಿ.ಎಸ್.ಆರ್ ಪ್ರೌಢಶಾಲೆಯ ಜಾಸ್ಮೀನ್ ಹುಸೇನಬಾಯಿ, ಸೈಂಟ್ ಜಾನ್ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಪವನಕುಮಾರ್, ಬೆಟಗೇರಿ ಬಾಸೆಲ್ ಮಿಶನ ಬಾಲಕರ ಪ್ರೌಢಶಾಲೆಯ ಉಲ್ಲಾಸ ಹೊನ್ನಾಳಿ, ವಿ.ಡಿ.ಎಸ್.ಟಿ.ಸಿ ಬಾಲಕಿಯರ ಪ್ರೌಢಶಾಲೆಯ ಸಹನಾ ಸಂಗಮದ ವಹಿಸಿದ್ದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ ಜಗದೀಶ್ ಹಾಗೂ ಡಿಎಸ್‌ಪಿ ವಿದ್ಯಾನಂದ ವಿ.ನಾಯಕ ಮಾರ್ಗದರ್ಶನದಲ್ಲಿ ಜರುಗಿದ ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪರೇಡ್ ಕಮಾಂಡರ್ ಶಂಕರಗೌಡ ಚೌದ್ರಿ ವಹಿಸಿದ್ದರು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ನೇತೃತ್ವವನ್ನು ವಿಜಯಕುಮಾರ್ ಜಿ ವಹಿಸಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!