ಬೆಂಗಳೂರು:- ಇದು ವಾಹನ ಸವಾರರು ಮಿಸ್ ಮಾಡ್ದೇ ನೋಡಲೇಬೇಕಾದ ಸ್ಟೋರಿ. ನಾಳೆಯಿಂದ ಬೆಂಗಳೂರಿನ ಪ್ರಮುಖ ರಸ್ತೆಯ ಎರಡು ಟೋಲ್ ದರ ಏರಿಕೆಯಾಗಲಿದೆ.
ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಟೋಲ್‍ವೇ ಶುಲ್ಕ ಹೆಚ್ಚಾಗಲಿದೆ. ಪರಿಣಾಮ ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಮತ್ತು ಕರ್ನಾಟಕ, ತಮಿಳುನಾಡು ಗಡಿಯ ಬಳಿಯ ಅತ್ತಿಬೆಲೆ ಕಡೆಯ ಮಾರ್ಗದಲ್ಲಿ ಚಲಿಸುವ ಪ್ರಯಾಣಿಕರು ಎಲಿವೇಟೆಡ್ ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಕುರಿತ ಪರಿಷ್ಕೃತ ದರಗಳು ಮಾರ್ಚ್ 31 ರ ಸಗಟು ಬೆಲೆ ಸೂಚ್ಯಂಕ ಆಧರಿಸಿ ದರ ಏರಿಕೆ ಮಾಡಲಾಗಿದೆ.
ದಿನದ ಟೋಲ್ ದರ ಜೊತೆ ಜೊತೆಗೆ ತಿಂಗಳ ಪಾಸ್ ಹಾಗೂ ವಾರ್ಷಿಕ ಪಾಸ್ ದರವೂ ಹೆಚ್ಚಳವಾಗುತ್ತಿದೆ. ಕಾರ್, ಜೀಪ್, ಲಘು ವಾಹನ, ಭಾರಿ ವಾಹನಗಳಲ್ಲಿ ಕನಿಷ್ಠ 5 ರೂಪಾಯಿ ಹೆಚ್ಚಳವಾಗಲಿದೆ.
ಅತ್ತಿಬೆಲೆ ಟೋಲ್ ದರ ಹೆಚ್ಚಳ:-
ಕಾರುಗಳು ಏಕ ಬದಿ ಪ್ರಯಾಣಕ್ಕೆ 40 ರೂಪಾಯಿ (ಹಳೆ ಬೆಲೆ 35).
ಲಘು ವಾಹನಗಳು, ಮಿನಿ ಬಸ್ 65 ರೂಪಾಯಿ (ಹಳೆ ಬೆಲೆ 60).
ಟ್ರಕ್, ಬಸ್ 125 ರೂಪಾಯಿ (ಹಳೆ ಬೆಲೆ 120).
ದೊಡ್ಡ ಮಲ್ಟಿ ಎಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್‌ಗೆ 265 ರೂಪಾಯಿ ಇದೆ (ಹಳೆ ಬೆಲೆ 260).
ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ದರ ಎಷ್ಟಾಗಲಿದೆ?
ಕಾರು, ಜೀಪ್, ನಾಲ್ಕು ಚಕ್ರದ ಲಘು ವಾಹನಗಳಿಗೆ ಒಂದು ಪ್ರಯಾಣಕ್ಕೆ 65 ರೂಪಾಯಿ (ಹಳೆ ಬೆಲೆ 60). ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 90 ರೂಪಾಯಿ (ಹಳೆ ಬೆಲೆ 85).
ದ್ವಿಚಕ್ರ ವಾಹನಗಳಿಗೆ ಒಂದು ಮಾರ್ಗದ ಪ್ರಯಾಣಕ್ಕೆ 25 ರೂಪಾಯಿ ಪಾವತಿಸಬೇಕಾಗಿದೆ (ಬದಲಾವಣೆ ಇಲ್ಲ).
ಲಾರಿ (ಟ್ರಕ್) ಹಾಗೂ ಬಸ್‌ಗಳಿಗೆ ಒಂದು ಬದಿ ಪ್ರಯಾಣಕ್ಕೆ 175 (ಹಳೆ ಬೆಲೆ 170) ರೂಪಾಯಿ.
ಮಲ್ಟಿ-ಆಕ್ಸಲ್ ವಾಹನಗಳಿಗೆ ಒಂದು ಬದಿಗೆ 350 ರೂಪಾಯಿ ಕಟ್ಟಬೇಕಿದೆ (ಹಳೆ ಬೆಲೆ 345).