ವಾಹನ ಸವಾರರ ಗಮನಕ್ಕೆ; ಬೆಂಗಳೂರಿನ ರಿಂಗ್ ರೋಡ್​​ನಲ್ಲಿ 1 ವಾರ ಸಂಚಾರ ನಿಷೇಧ

0
Spread the love

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ವಾಹನ ಸವಾರರು ನೋಡಲೇಬೇಕಾದ ಸುದ್ದಿ.

Advertisement

ರಾಜಧಾನಿ ಬೆಂಗಳೂರಿನ ರಿಂಗ್ ರೋಡ್​​ನಲ್ಲಿ 1 ವಾರ ಸಂಚಾರ ನಿಷೇಧ ಮಾಡಲಾಗಿದ್ದು, ಪರ್ಯಾಯ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 19ರಿಂದ ಸೆಪ್ಟೆಂಬರ್ 26ರವರೆಗೆ ರಿಂಗ್ ರೋಡ್​ ನಲ್ಲಿ ಎಲ್ಲಾ ಮಾದರಿಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಲೇ ಅರೇಬಿಯಾ, ಬಿರಿಯಾನಿ ಜೋನ್, ಕ್ರೋಮ್ ಜಂಕ್ಷನ್​ ಬಳಿ ಹೊರವರ್ತುಲ ರಸ್ತೆಯಿಂದ ಮಾರತ್ತಹಳ್ಳಿ-ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಮಹದೇವಪುರ ಕಾರ್ತಿಕ್ ನಗರ ಕಡೆಯಿಂದ ಲೇ ಅರೇಬಿಯಾ ಮತ್ತು ಬಿರಿಯಾನಿ ಪಾಯಿಂಟ್ ಮೂಲಕ ಮಾರತಹಳ್ಳಿ- ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆಗೆ ಸಂಚರಿಸುವ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ವಾಹನ ಸವಾರರು ಕಡ್ಡಾಯವಾಗಿ ಕಲಾಮಂದಿರದ ಬಳಿ ಸರ್ವಿಸ್ ರಸ್ತೆಗೆ ತೆರಳಿ ಮಾರತಹಳ್ಳಿ ಕಾಂತಿ ಸ್ವೀಟ್ಸ್​ ಅಂಡರ್ ಪಾಸ್ ಬಳಿ ಯುಟರ್ನ್ ತೆಗೆದುಕೊಳ್ಳಬೇಕು. ಬಳಿಕ ಮಾರತಹಳ್ಳಿ ಸೇತುವೆಯ ಬಳಿ ಎಡಕ್ಕೆ ತಿರುಗಿ ಮುನ್ನೇಕೊಳಾಲ ಕಾಡುಬೀಸನಹಳ್ಳಿ ಜಂಕ್ಷನ್, ಪಣತ್ತೂರು ಮತ್ತು ಕರಿಯಮ್ಮನ ಅಗ್ರಹಾರ ಕಡೆಗೆ ಹೋಗಲು ಸರ್ವಿಸ್ ರಸ್ತೆಯಲ್ಲಿ ಸಂಚರಿಸಬಹುದು.

ದೇವರಬೀಸನಹಳ್ಳಿ ಹಾಗೂ ಬೆಳಂದೂರು ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಕಡ್ಡಾಯವಾಗಿ ಹೊರ ವರ್ತುಲ ರಸ್ತೆಯ ಮೂಲಕವೇ ಸಂಚರಿಸುವುದು. ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಈ ಮೇಲ್ಕಂಡ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here