ಮಕ್ಕಳಿಗೆ ಡೈಪರ್ ತೊಡಿಸಿದರೆ ಅವರ ಮಲ-ಮೂತ್ರದ ಸ್ವಚ್ಛತೆಗೆ ಅನುಕೂಲವಾಗುವುದು. ಜೊತೆಗೆ ಅವರನ್ನು ಎತ್ತಿಕೊಂಡಾಗ ಬೇರೆಯವರ ಕೈಗಳಿಗೆ ಮಲ- ಮೂತ್ರಗಳು ಬಡಿಯುವುದಿಲ್ಲ ಎನ್ನುವ ನೆಮ್ಮದಿ ಇರುತ್ತದೆ. ಆದರೆ ದೀರ್ಘ ಸಮಯಗಳ ಕಾಲ ಡೈಪರ್ ತೊಡಿಸಿದರೆ ಮಗುವಿನ ಚರ್ಮದ ಮೇಲೆ ಅಡ್ಡ ಪರಿಣಾಮ ಬೀರುವುದು. ಮಗುವಿನ ಚರ್ಮದಲ್ಲಿ ರ್ಯಾಶಸ್‍ಗಳು, ತುರಿಕೆ, ಉರಿಯೂತದಂತಹ ಸಮಸ್ಯೆಗಳು ಸಹ ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ.
ಹೀಗಾಗಿ ಡೈಪರ್ ಹಾಕುವ ಮುನ್ನ ಈ ವಿಚಾರಗಳನ್ನು ನೆನಪಿಡಿ.
ಮಗುವಿನ ತೂಕಕ್ಕೆ ಅನುಗುಣವಾಗಿ ಡೈಪರ್ ತಯಾರಿಸಲಾಗುತ್ತದೆ: ಮಗುವಿನ ಡೈಪರ್ ಅನ್ನು ಅವರ ತೂಕಕ್ಕೆ ಅನುಗುಣವಾಗಿ ತಯಾರಿಸಲಾಗುತ್ತದೆ. ಇದು ಮಗುವಿನ ವಯಸ್ಸು ಮತ್ತು ಲಿಂಗಕ್ಕೆ ಸಂಬಂಧಿಸಿರುವುದಿಲ್ಲ. ಆದ್ದರಿಂದ ನಿಮ್ಮ ಮಗುವಿಗೆ ಡೈಪರ್ ಖರೀದಿಸುವ ಮೊದಲು ಮಗುವಿನ ತೂಕ ಎಷ್ಟಿದೆಯೆಂದು ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಡೈಪರ್ ಮೇಲಿನ ಪ್ಲಸ್ ಗುರುತಿನ ಅರ್ಥ: ಮಗುವಿಗೆ ತೊಡಿಸುವ ಡೈಪರ್‌ನ ಅಂಟಿಸುವ ಜಾಗದಲ್ಲಿ ಪ್ಲಸ್ (+) ಮಾರ್ಕ್ ಇರುತ್ತದೆ. ನಿಮ್ಮ ಮಗುವಿನ ಡೈಪರ್ ಆ ಪ್ಲಸ್ ಮಾರ್ಕ್ ಅನ್ನು ತಲುಪುತ್ತಿದೆ ಎಂದರೆ ಮಗುವಿನ ಗಾತ್ರ ಹೆಚ್ಚುತ್ತಿದೆ. ಅಂದರೆ ಮಗುವಿಗೆ ದೊಡ್ಡ ಸೈಜ್‌ನ ಡೈಪರ್ ಅವಶ್ಯಕತೆಯಿದೆ ಎಂದರ್ಥ. ಕೆಲವರ ಪ್ರಕಾರ + ಸೈಜ್‌ನ ಡೈಪರ್ ಹೆಚ್ಚು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಈ ಡೈಪರ್‌ಗಳು ಅಧಿಕ ಮೂತ್ರ ವಿಸರ್ಜನೆ ಮಾಡುವ ಮಗುವಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಹೇಳುತ್ತಾರೆ.
ಡೈಪರ್ ಮೇಲಿನ ಎಕ್ಸ್ ಚಿಹ್ನೆಯ ಅರ್ಥ: ಕೆಲವು ಡೈಪರ್‌ಗಳನ್ನು ಅಂಟಿಸುವ ಜಾಗದಲ್ಲಿ ಎಕ್ಸ್ (X) ಮಾರ್ಕ್ ಇರುತ್ತದೆ. ಮಗುವಿಗೆ ಡೈಪರ್ ತೊಡಿಸುವಾಗ ಅದು ಎಕ್ಸ್ ಮಾರ್ಕ್ ಅನ್ನು ತಲುಪುತ್ತಿದ್ದರೆ ಆ ಡೈಪರ್ ನಿಮ್ಮ ಮಗುವಿಗೆ ಚಿಕ್ಕದಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಕಡಿಮೆ ಸೈಜ್‌ನ ಡೈಪರ್‌ನಿಂದ ಮಗುವಿಗೆ ತೊಂದರೆಯಾಗುತ್ತದೆ. ಇದರಿಂದ ರ‍್ಯಾಶಸ್ ಉಂಟಾಗುವ ಸಂಭವ ಹೆಚ್ಚು. ಅದಕ್ಕಾಗಿ ಪೋಷಕರು ಮಗುವಿಗೆ ಡೈಪರ್ ತೊಡಿಸುವಾಗ ಎಚ್ಚರದಿಂದಿರಬೇಕು.