ಆಸ್ತಿ ಮಾಲೀಕರ ಗಮನಕ್ಕೆ: ಇನ್ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಿಗಲಿದೆ ಇ-ಖಾತಾ!

0
Spread the love

ಬೆಂಗಳೂರು:- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರು ನಾಗರೀಕರಿಗೆ ಪ್ರಾಪರ್ಟಿ ದಾಖಲೆಗಳನ್ನು ಸುಲಭವಾಗಿ ದೊರಕುವಂತೆ ಮಾಡಲು ಹೊಸ ಕಾರ್ಯತಂತ್ರ ಆರಂಭಿಸಿದೆ.

Advertisement

ಕೇವಲ 45 ರೂಪಾಯಿ ನೀಡಿ ಇಲ್ಲಿ ಇ-ಖಾತಾ ಪಡೆಯಬಹುದಾಗಿದೆ. ಈ ಬಗ್ಗೆ ಬಿಬಿಎಂಪಿ ಮಾಧ್ಯಮ ಮಾಹಿತಿ ನೀಡಿದ್ದು, ” ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂತಿಮ ಇ-ಖಾತಾ ವನ್ನು ಪಡೆಯಲು ಬೆಂಗಳೂರು ಒನ್ ಕೇಂದ್ರದ ಮೂಲಕ ಸಹಾಯವನ್ನು ಪಡೆಯಬಹುದು ” ಎಂದು ತಿಳಿಸಿದೆ.

ಬೇಕಾಬಿಟ್ಟಿ ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಲು ಈ ಪ್ಲಾನ್ ಮಾಡಿರುವ ಬಿಬಿಎಂಪಿ, ಇದೀಗ ಜನರು ತಮ್ಮ ಹತ್ತಿರದ ಬೆಂಗಳೂರು ಒನ್ ಕೇಂದ್ರಗಳಲ್ಲಿ ದಾಖಲೆಗಳನ್ನು ಸಲ್ಲಿಸಿ ಶೀಘ್ರವಾಗಿ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದೆ.

ಇ ಖಾತಾ ಪಡೆಯುವುದು ಹೇಗೆ?
ನಾಗರೀಕರು ಇ-ಖಾತಾವನ್ನು ಹೇಗೆ ಪಡೆಯಬೇಕು ಎಂಬ ವಿಡಿಯೋ ಬಿಡುಗಡೆ ಮಾಡಿರುವ ಪಾಲಿಕೆ, ಈ ವಿಡಿಯೋ ನೋಡಿಕೊಂಡು ಸುಲಭವಾಗಿ ಅಪ್ ಲೋಡ್ ಮಾಡುವುದಕ್ಕೆ ನೆರವಾಗಲು ಹೊರಟಿದೆ. ಸದ್ಯ ಪಾಲಿಕೆಯ ಯೂಟ್ಯೂಬ್ ಚಾನೆಲ್​ನಲ್ಲಿ ಕನ್ನಡ ಹಾಗೂ ಇಂಗ್ಲೀಷ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಆ ಮೂಲಕ ಇ-ಖಾತಾ ಬಗ್ಗೆ ಜನರಿಗಿರುವ ಗೊಂದಲಗಳನ್ನು ನಿವಾರಿಸಲು ಪಾಲಿಕೆ ಮುಂದಾಗಿದೆ.

ಒಟ್ಟಿನಲ್ಲಿ ವಲಯವಾರು ಸಹಾಯವಾಣಿ, ಪಾಲಿಕೆ ಕಚೇರಿಗಳಲ್ಲಿ ನೆರವು ಕೇಂದ್ರಗಳು ಹೀಗೆ ಹಲವು ಪ್ಲಾನ್​ಗಳ ಮೂಲಕ ಇ-ಖಾತಾ ಪಡೆಯುವುದನ್ನು ಸುಲಭ ಮಾಡಲು ಹೊರಟಿದ್ದ ಪಾಲಿಕೆ, ಇದೀಗ ಬೆಂಗಳೂರು ಒನ್ ಕೇಂದ್ರದಲ್ಲೂ ಇ-ಖಾತಾ ಪಡೆಯಲು ಅವಕಾಶ ಕೊಟ್ಟಿರುವುದು ನಗರವಾಸಿಗಳಿಗೆ ಸಂತಸ ತಂದಿದೆ.


Spread the love

LEAVE A REPLY

Please enter your comment!
Please enter your name here