ಚಿಕ್ಕಮ್ಮನ ಮೇಲೆ ಇಬ್ಬರು ಸಹೋದರರಿಂದ ಅತ್ಯಾಚಾರ ಆರೋಪ..! ಕಾನ್‌ಸ್ಟೆಬಲ್ ವಿರುದ್ಧ ದೂರು

0
Spread the love

ಯಾದಗಿರಿ: ಪೊಲೀಸರೆಂದರೆ ಒಂದು ನಂಬಕೆ ಹಾಗೂ ಧೈರ್ಯ. ಆದರೆ ಅಂತಹ ಹುದ್ದೆಗೆ ಅಪವಾದವೆಂಬಂತೆ ಇಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ. ಹೌದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಪೇಟ್ಲಾ ಗ್ರಾಮದಲ್ಲಿ ಸ್ವಂತ ಚಿಕ್ಕಪ್ಪನ ಪತ್ನಿಯನ್ನೇ ಕಾನ್ಸ್​ಟೇಬಲ್ ಹಾಗೂ ಆತನ ಸೋದರ ಅತ್ಯಾಚಾರ ಮಾಡಿರುವಂತಹ ಆರೋಪ ಕೇಳಿಬಂದಿದೆ.

Advertisement

ರಮೇಶ್ ಮತ್ತು ಜೆಸ್ಕಾಂ ನೌಕರ ಲಕ್ಷ್ಮಣ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದು, ಸತತ ಏಳು ವರ್ಷಗಳಿಂದ ಇಬ್ಬರು ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಪ್ರಾಣ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.

ಜೊತೆಗೆ ತನ್ನ ಮಗಳಿಗೆ ಅಶ್ಲೀಲ ವಾಟ್ಸಪ್ ಮೆಸೇಜ್ ಕಳುಹಿಸುತ್ತಿದ್ದರು. ಬಟ್ಟೆಯನ್ನ ಬಿಚ್ಚಿ ಬೆತ್ತಲೆ ದೇಹವನ್ನ ತೋರಿಸು ಎಂದು ಪೀಡಿಸುತ್ತಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here