ತರಾತುರಿಯಲ್ಲಿ ಮುನಿರತ್ನ ಬಂಧಿಸುವ ಅವಶ್ಯಕತೆ ಏನಿತ್ತು!? ಆರ್ ಅಶೋಕ್ ಪ್ರಶ್ನೆ!

0
Spread the love

ಬೆಂಗಳೂರು:- ತರಾತುರಿಯಲ್ಲಿ ಮುನಿರತ್ನ ಬಂಧಿಸುವ ಅವಶ್ಯಕತೆ ಏನಿತ್ತು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು,ಗೃಹ ಸಚಿವರು ಪ್ಲ್ಯಾನ್​ ಮಾಡಿ ಅರೆಸ್ಟ್ ಮಾಡಿಸಿದ್ದಾರೆ. ಇಲ್ಲದಿದ್ದರೆ ಇವತ್ತೇ ಏಕೆ ಅವರನ್ನ ಅರೆಸ್ಟ್ ಮಾಡಿದ್ರು? 3 ದಿನ ಕೋರ್ಟ್ ಇಲ್ಲ ಅಂತಾ ಪ್ಲ್ಯಾನ್​ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ತರಾತುರಿಯಲ್ಲಿ ಕೋಲಾರಕ್ಕೆ ಹೋಗಿ ಬಂಧಿಸುವ ಅವಶ್ಯಕತೆ ಏನಿತ್ತು? ಕಾನೂನು ಪ್ರಕಾರ ಅವರಿಗೆ ನೋಟಿಸ್ ಕೊಡಬೇಕಾಗಿತ್ತು. ಮುನಿರತ್ನ ಅವರು ಏನೂ ಎಲ್ಲೂ ಓಡಿ ಹೋಗುತ್ತಿರಲಿಲ್ಲ. ಆ ಆಡಿಯೋ​​ ಎಫ್​ಎಸ್​ಎಲ್​ಗೆ ಕೊಡಬೇಕಾಗಿತ್ತು. ನಿನ್ನೆಯೇ ಏಕೆ ಅವನು ಮುನಿರತ್ನ ವಿರುದ್ಧ ದೂರು ಕೊಟ್ಟ? ಜೈಲಿಗೆ ಕಳುಹಿಸಲೇಬೇಕೆಂದು ದ್ವೇಷದ ರಾಜಕಾರಣ ಎಂದು ಕಿಡಿಕಾರಿದ್ದಾರೆ.

ದೂರುದಾರ ಚಲುವರಾಜು ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ್ದು, ಸಾಮಾನ್ಯ ವ್ಯಕ್ತಿ ಸಿಎಂ ಅಪಾಯಿಂಟ್​ಮೆಂಟ್​ ಪಡೀತಾರಂದ್ರೆ ಏನರ್ಥ? ಇದು ಪ್ರೀ ಪ್ಲ್ಯಾನ್​. ಇವರೇ ಹೇಳಿ ಕಳುಹಿಸಿರುತ್ತಾರೆ ಬಂದುಬಿಡು, ದೂರು ಕೊಡು. ನಾನು ಆ್ಯಕ್ಷನ್ ತೆಗೆದುಕೊಳ್ಳುತ್ತೇನೆ. ಇದು ಜೈಲಿಗೆ ಕಳಿಸೋಣ ಅಂತಾ ಗೃಹಸಚಿವರು ಮಾಡಿದ ಹುನ್ನಾರ ಎಂದು ಹೇಳಿದ್ದಾರೆ.

ಇಡೀ ದೃಶ್ಯವನ್ನ ನೋಡಿದರೆ ದ್ವೇಷ ಬಿಟ್ಟು ಬೇರೆ ಏನೂ ಇಲ್ಲ. ಇದಕ್ಕೆ ಬಿಜೆಪಿ ಜಗ್ಗುವುದೂ ಇಲ್ಲ ಬಗ್ಗುವುದಿಲ್ಲ. ನಾಗಮಂಗಲ ಗಲಭೆ ಮರೆಮಾಚಲು ಈ ಹುನ್ನಾರ ಮಾಡಿದ್ದಾರೆ. ಪರಮೇಶ್ವರ್ ಹಿರಿಯರು, ಹೀಗೆ ನಡೆದುಕೊಳ್ಳುವುದು ಸರಿಯಲ್ಲ. ಮುನಿರತ್ನ ತಪ್ಪು ಮಾಡಿದ್ದರೆ ನಾವ್ಯಾರೂ ಬೆಂಬಲ ನೀಡುವುದಿಲ್ಲ. ನಾನು ಪಕ್ಷದ ಮುಖಂಡರ ಜೊತೆ ಮಾತಾಡುತ್ತಿದ್ದೇನೆ. ಪಕ್ಷದ ನಿಲುವು ತಿಳಿದು ಹೇಗೆ ಬೆಂಬಲಿಸಬೇಕೆಂದು ಯೋಚಿಸುತ್ತೇನೆ ಎಂದು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here